ADVERTISEMENT

ತಾಳಿಕೋಟೆ | ಬುದ್ಧ ಈ ನೆಲದ ಬೆಳಕು: ಪ್ರೊ.ಎಚ್.ಟಿ. ಪೋತೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 6:09 IST
Last Updated 17 ಅಕ್ಟೋಬರ್ 2025, 6:09 IST
<div class="paragraphs"><p>ತಾಳಿಕೋಟೆ ಪಟ್ಟಣದ ಎಸ್.ಕೆ.ಕಾಲೇಜಿನ ವಿರಕ್ತ ಶ್ರೀ ಸಭಾಭವನದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕಲಬುರ್ಗಿ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ ಮಂಗಳವಾರ ಉದ್ಘಾಟಿಸಿದರು</p></div>

ತಾಳಿಕೋಟೆ ಪಟ್ಟಣದ ಎಸ್.ಕೆ.ಕಾಲೇಜಿನ ವಿರಕ್ತ ಶ್ರೀ ಸಭಾಭವನದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕಲಬುರ್ಗಿ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ ಮಂಗಳವಾರ ಉದ್ಘಾಟಿಸಿದರು

   

ತಾಳಿಕೋಟೆ: ‘ಬುದ್ಧ ಈ ನೆಲದ ಬೆಳಕು; ಬುದ್ಧನ ತದ್ರೂಪೇ ಬಸವಣ್ಣ. ಇಬ್ಬರಲ್ಲೂ ನೈತಿಕ ಮೌಲ್ಯಗಳು ಒಂದೆಯಾಗಿವೆ. ಇಬ್ಬರೂ ಬೋಧಿಸಿದ್ದು ಒಂದೆ. ಮಹಿಳೆಯರು, ಶೋಷಿತರು, ಕೆಳವರ್ಗದವರಿಗೆ ದನಿಯಾಗಿರುವುದನ್ನು ಕಾಣಬಹುದು. ಇವರ ನಂತರ ಅಂಬೇಡ್ಕರ್. ಈ ಮೂವರು ಸಮಸಮಾಜದ ನಿರ್ಮಾಪಕರು’ ಎಂದು ಕಲಬುರ್ಗಿ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ ಹೇಳಿದರು.

ಪಟ್ಟಣದ ಎಸ್.ಕೆ.ಕಾಲೇಜಿನ ವಿರಕ್ತ ಶ್ರೀ ಸಭಾಭವನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವೇದಿಕೆ ವಿಜಯಪುರ, ಶ್ರೀ ಖಾಸ್ಗತೇಶ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಕನ್ನಡ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಂಗಳವಾರ ಮಾತನಾಡಿದರು.

ADVERTISEMENT

‘ಕನ್ನಡ ಸಾಹಿತ್ಯದಲ್ಲಿ ಶೈಕ್ಷಣಿಕ ಮೌಲ್ಯಗಳು’ ಕುರಿತು ಮಾತನಾಡಿದ ವಿಜಯಪುರದ ಸಾಹಿತಿ ಸಂಗಮೇಶ ಮೇತ್ರಿ, ‘ಮೌಲ್ಯಗಳು ಎಂದರೆ ಜ್ಯೋತಿಯಾಗಬೇಕು. ನಿಸ್ವಾರ್ಥ, ನಿಷ್ಕಾಮಪ್ರೀತಿ ಇರಬೇಕು. ಸಮಸಮಾಜದ ಕನಸಿರಬೇಕು. ದ್ವೇಷರಹಿತ ಬದುಕು ನಮ್ಮದಾಗಬೇಕು. ಪಂಪ ಹೇಳಿದಂತೆ ಮಾನವಕುಲಂ ಒಂದೇ ವಲಂ ಎಂಬಲ್ಲಿ ಅತಿದೊಡ್ಡ ನೈತಿಕ ಮೌಲ್ಯವಿದೆ’ ಎಂದರು.

ಕಲಬುರ್ಗಿಯ ಹಿರಿಯ ಸಾಹಿತಿ ಶ್ರೀಶೈಲ ನಾಗರಾಳ(ಇಜೇರಿ), ಬೆಂಗಳೂರು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಮಹಾದೇವ ಬಸರಕೋಡ ಮಾತನಾಡಿದರು.

ಅಧ್ಯಕ್ಷತೆಯನ್ನು ಎಸ್.ಕೆ.ಕಾಲೇಜಿನ ಚೇರ್ಮನ್‌ ವಿ.ಸಿ. ಹಿರೇಮಠ ವಹಿಸಿದ್ದರು. ಎಸ್.ಕೆ.ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಸುಜಾತಾ ಚಲವಾದಿ ಪ್ರಾಸ್ತಾವಿಕ ಮಾತನಾಡಿದರು.

ಎಸ್.ಕೆ.ಕಾಲೇಜಿನ ಪ್ರಾಚಾರ್ಯ ದಯಾನಂದ ಮೂಗಡ್ಲಿಮಠ, ಚಕೋರ ಸಾಹಿತ್ಯ ವೇದಿಕೆ ವಿಜಯಪುರ ಸಂಚಾಲಕ ಸಾಹಿತಿ ಶಂಕರ ಬೈಚಬಾಳ, ಪ್ರೊ.ಅಜಯ ಹೆಬ್ಬಾರ, ಪ್ರೊ.ಸಾಹೇಬಗೌಡ ಕಡದರಾಳ, ಪ್ರೊ. ಸಂಗೀತಾ ಕೊಡೆಕಲ್ಲಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.