
ಇಂಡಿ: ಅಸಮರ್ಪಕ ಜೀವನಶೈಲಿ, ಆಹಾರ ಪದ್ಧತಿ, ಮಾನಸಿಕ ಒತ್ತಡ, ಮಾದಕ ವಸ್ತುಗಳ ಸೇವನೆ ಇತ್ಯಾದಿ ಕಾರಣಗಳಿಂದ ಕ್ಯಾನ್ಸರ್ ಪೀಡಿತರ ಸಂಖ್ಯೆ ತಾಲ್ಲೂಕಿನಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ಎಂದು ಡಾ.ಸಂತೋಷ ಪಾಟೀಲ ಹೇಳಿದರು.
ನಗರದ ಡಾ.ಸಿದ್ದು ಮೇತ್ರಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ವಿಶ್ವ ಕ್ಯಾನ್ಸರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ.ಭಾರತಿ ಗಜಾಕೋಶ ಮಾತನಾಡಿ, ಕ್ಯಾನ್ಸರ್‌ಗೆ ತುತ್ತಾಗುತ್ತಿರುವವರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಗರ್ಭಿಣಿಯರಲ್ಲಿ ರಕ್ತ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಕೋಶ, ಯೋನಿ, ಗುದ, ಗಂಟಲು, ಕೊರಳ ಕ್ಯಾನ್ಸರ್ ಹೀಗೆ ಹಲವು ರೀತಿಯ ಕ್ಯಾನ್ಸರಗಳು ಕಾಣಿಸಿಕೊಳ್ಳುತ್ತಿವೆ. ಫಾಸ್ಟ್‌ಫುಡ್, ಝಂಕ ಫುಡ್, ದಿನನಿತ್ಯದ ಜೀವನದಲ್ಲಿಯ ಒತ್ತಡದಿಂದಾಗಿ ಹೆಚ್ಚಿನವರಲ್ಲಿ ಮಹಿಳೆಯರು ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ ಎಂದರು.
ಡಾ.ಮಲ್ಲಿಕಾರ್ಜುನ ಅಂಕಲಗಿ ಮಾತನಾಡಿ, ಸಿಗರೇಟ್ ಸೇವನೆ, ಮಿತಿಮೀರಿದ ಮಧ್ಯಪಾನ, ಮಾನಸಿಕ ಒತ್ತಡ ಕ್ಯಾನ್ಸರಕ್ಕೆ ಕಾರಣವಾಗುತ್ತಿದ್ದು ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕಾಗಿದೆ ಎಂದರು.
ಡಾ.ಸಿದ್ದು ಮೇತ್ರಿ, ಪ್ರೊ.ವಿಜಯಕುಮಾರ ರಾಠೋಡ ಮಾತನಾಡಿದರು. ವೈದ್ಯ ಕುಮಾರಗೌಡ ಪಾಟೀಲ, ಕ್ಯಾನ್ಸರ್ ರೋಗಿಗಳಾದ ನಿವೇದಿತಾ ಮತ್ತು ವಿಶಾಲ ಶಹಾ ಮಾತನಾಡಿದರು. ಡಾ.ವಿಕಾಸ ಸಿಂದಗಿ, ಡಾ.ಅಮೀತ ಕೋಳೆಕರ, ಡಾ.ವಿಪುಲ್ ಕೋಳೆಕರ, ಡಾ.ಪ್ರವೀಣ ಗಜಾಕೋಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.