ADVERTISEMENT

ವಿಜಯಪುರ | ಕ್ರಿಸ್ಮಸ್‌: ವಿದ್ಯುತ್‌ ದೀಪಗಳಿಂದ ಸಿಂಗಾರಗೊಂಡ ಚರ್ಚ್‌ಗಳು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 3:22 IST
Last Updated 25 ಡಿಸೆಂಬರ್ 2025, 3:22 IST
ವಿಜಯಪುರ ನಗರದ ಸ್ಟೇಷನ್‌ ರಸ್ತೆ ಪಕ್ಕದಲ್ಲಿ ಸಾಂಟಾ ಕ್ಲಾಸ್‌ ಟೊಪ್ಪಿ, ಕ್ರಿಸ್ಮಸ್‌ ಟ್ರೀಗಳ ಮಾರಾಟ ಜೋರಾಗಿತ್ತು –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರ ನಗರದ ಸ್ಟೇಷನ್‌ ರಸ್ತೆ ಪಕ್ಕದಲ್ಲಿ ಸಾಂಟಾ ಕ್ಲಾಸ್‌ ಟೊಪ್ಪಿ, ಕ್ರಿಸ್ಮಸ್‌ ಟ್ರೀಗಳ ಮಾರಾಟ ಜೋರಾಗಿತ್ತು –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ   

ವಿಜಯಪುರ: ಕ್ರಿಸ್ಮಸ್‌ ಹಬ್ಬಕ್ಕೆ ಗುಮ್ಮಟನಗರಿಯ ಚರ್ಚ್‌ಗಳು ವಿದ್ಯುತ್‌ ದೀಪಗಳಿಂದ ಆಲಂಕೃತವಾಗಿದ್ದು, ಕಂಗೊಳಿಸುತ್ತಿವೆ.  

ನಗರದ ಎಂ.ಜಿ.ರಸ್ತೆಯ ಗಾಂಧಿ ವೃತ್ತದ ಬಳಿ ಇರುವ ಸಂತ ಆ್ಯನಿಸ್‌ ಚರ್ಚ್‌ನಲ್ಲಿ ಕ್ರಿಸ್ಮಸ್‌ ಪ್ರಾರ್ಥನೆಗೆ ವಿಶೇಷ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಾಲ ಯೇಸುವಿನ ಜನನದ ವೃತ್ತಾಂತವನ್ನು ತಿಳಿಸುವ ಗೋದಳಿಯನ್ನು ನಿರ್ಮಿಸಿ, ವಿದ್ಯುತ್‌ ದೀಪಗಳಿಂದ ಆಲಂಕರಿಸಲಾಗಿದೆ. ಕ್ರಿಸ್ಮಸ್‌ ಟ್ರೀ ಗಮನ ಸೆಳೆಯುತ್ತಿದೆ.

ನಗರದ ಬಸ್‌ ನಿಲ್ದಾಣದ ಸಮೀಪ ಇರುವ ಸಿ.ಎಸ್‌.ಐ ಚರ್ಚ್‌ನಲ್ಲೂ ಕ್ರಿಸ್ಮಸ್‌ ಸಂಭ್ರಮ ಮನೆ ಮಾಡಿದೆ. ಬಣ್ಣಬಣ್ಣದ ವಿದ್ಯುತ್‌ ದೀಪಗಳಿಂದ ಚರ್ಚ್‌ ಜಗಮಗಿಸುತ್ತಿದೆ. 

ADVERTISEMENT

ನಗರದ ಪ್ರಮುಖ ಮಾರ್ಗಗಳಲ್ಲಿ ಒಂದು ವಾರದಿಂದ ಸಾಂಟಾ ಕ್ಲಾಸ್‌ ಟೊಪ್ಪಿ, ಕ್ರಿಸ್ಮಸ್‌ ಟ್ರೀಗಳನ್ನು ವ್ಯಾಪಾರಿಗಳು ಮಾರಾಟಕ್ಕೆ ಇಟ್ಟಿದ್ದಾರೆ. ಮಕ್ಕಳು ಖರೀದಿಸಿ ಕೊಂಡೊಯ್ಯುತ್ತಿದ್ದಾರೆ. ಕ್ರಿಸ್ಮಸ್‌ ಅಂಗವಾಗಿ ಬೇಕರಿಗಳಲ್ಲಿ ಬಗೆಬಗೆಯ ಕೇಕ್‌ಗಳನ್ನು ಸಿದ್ಧಪಡಿಸಿ, ಮಾರಾಟಕ್ಕೆ ಸಜ್ಜುಗೊಳಿಸಿದ್ದಾರೆ.

ಕ್ರೈಸ್ತ ಬಾಂಧವರ ಮನೆಗಳಲ್ಲಿ ಬಣ್ಣ ಬಣ್ಣದ ಆಕಾಶ ದೀಪಗಳು, ವಿದ್ಯುತ್‌ ದೀಪಗಳು ಕಂಗೊಳಿಸುತ್ತಿವೆ. ಕ್ರಿಸ್ಮಸ್‌ ದಿನವಾದ ಗುರುವಾರ(ಡಿ.25) ರಾತ್ರಿ ವಿಶೇಷ ಪ್ರಾರ್ಥನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ವಿಜಯಪುರ ನಗರದ ಎಂ.ಜಿ.ರಸ್ತೆಯ ಗಾಂಧಿ ವೃತ್ತದ ಬಳಿ ಇರುವ ಸಂತ ಆ್ಯನಿಸ್‌ ಚರ್ಚ್‌ನಲ್ಲಿ ನಿರ್ಮಿಸಿರುವ ಆಕರ್ಷಕ ಗೊಂದಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.