ADVERTISEMENT

ಕೌಟುಂಬಿಕ ಕಲಹ: ನಟ ರಾಜು ತಾಳಿಕೋಟೆಗೆ ಹಲ್ಲೆ 

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 14:25 IST
Last Updated 14 ಸೆಪ್ಟೆಂಬರ್ 2021, 14:25 IST
ನಟ ರಾಜು ತಾಳಿಕೋಟೆ
ನಟ ರಾಜು ತಾಳಿಕೋಟೆ    

ವಿಜಯಪುರ: ಹಾಸ್ಯ ನಟ, ರಂಗಕರ್ಮಿ ರಾಜು ತಾಳಿಕೋಟೆ ಅವರ ಮೇಲೆ ಸಂಬಂಧಿಯೊಬ್ಬರು ಹಲ್ಲೆ ನಡೆಸಿದ್ದಾರೆ.

ನಗರದ ಯೋಗಾಪುರ ಆಶ್ರಯ ಕಾಲೊನಿಯಲ್ಲಿ ಹಲ್ಲೆ ನಡೆದಿದೆ. ಎಸ್‌.ಕೆ ಮೋದಿ ಎಂಬಾತ ಪಿಸ್ತೂಲ್‌ ಹಣೆಗಿಟ್ಟು ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದಾನೆ ಎಂದು ರಾಜು ತಾಳಿಕೋಟೆ ಆರೋಪಿಸಿದ್ದಾರೆ. ಅವರು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪ್ರತಿ ದೂರು ದಾಖಲು:

ADVERTISEMENT

ರಾಜು ತಾಳಿಕೋಟೆ ಅವರು ಅಳಿಯ ಫಯಾಜ್ ಕರಜಗಿ ಅವರ ಪತ್ನಿ ಸನಾ ಕರಜಗಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವಿಜಯಪುರ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರತಿದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.