ADVERTISEMENT

ಅಕ್ರಮ ಚಟುವಟಿಕೆಗಳಿಗೆ ಕುಮ್ಮಕ್ಕು: ಪೋಲಿಸ್ ಅಧಿಕಾರಿಗಳ ಅಮಾನತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 15:46 IST
Last Updated 19 ಜುಲೈ 2024, 15:46 IST
ಅಣ್ಣಪ್ಪ ಖೈನೂರ
ಅಣ್ಣಪ್ಪ ಖೈನೂರ   

ಚಡಚಣ: ‘ಅಕ್ರಮ ಚಟುವಟಿಗೆಳಿಗೆ ಕುಮ್ಮಕ್ಕು ನೀಡುತ್ತಿರುವ ಹೋರ್ತಿ ಪೋಲಿಸ್ ಠಾಣಾಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು’ ಎಂದು ರೈತ ಮುಖಂಡ ಅಣ್ಣಪ್ಪಸಾಹುಕಾರ ಖೈನೂರ ಆಗ್ರಹಿಸಿದರು.

ಈ ಕುರಿತು ಶುಕ್ರವಾರ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ‘ಹೊರ್ತಿ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಕಿರಾಣಿ ಅಂಗಡಿಗಳಲ್ಲಿ, ಡಾಬಾಗಳಲ್ಲಿ ಅಕ್ರಮ ಸಾರಾಯಿ ಮಾರಾಟವಾಗುತ್ತಿದೆ. ಮಾರಾಟಗಾರರನ್ನು ಕೇಳಿದರೆ ಅಧಿಕಾರಿಗಳಿಗೆ ಹಪ್ತಾ ನೀಡುತ್ತೇವೆ ಎಂದು ಹೇಳುತ್ತಾರೆ’ ಎಂದು ದೂರಿದರು.

‘ಗ್ರಾಮೀಣ ಜನರು ನೆಮ್ಮದಿಯಾಗಿ ಜೀವನ ನಡೆಸಬೇಕಾದರೆ ಅಕ್ರಮ ಸಾರಾಯಿ ಮಾರಾಟ, ಜೂಜಾಟ ಮತ್ತು ಮಟ್ಕಾ ದಂಧೆಗಳಿಗೆ ಕಡಿವಾಣ ಹಾಕಬೇಕಾದ ಪೊಲೀಸ್‌ ಅಧಿಕಾರಿಗಳೇ ಅದರಲ್ಲಿ ಶಾಮೀಲಾದರೆ ಜನ ಸಾಮಾನ್ಯರ ಗತಿ ಏನು? ಬಡ ಕುಟುಂಬಗಳು ಬೀದಿಗೆ ಬರುತ್ತಿವೆ. ಕುಡಿದ ಅಮಲಿನಲ್ಲಿ ಹೊಡೆದಾಟ ಬಡೆದಾಟ ಪ್ರಕರಣಗಳು ಹೆಚ್ಚುತ್ತಿವೆ. ಸಣ್ಣ ಪುಟ್ಟ ಪ್ರಕರಣಗಳು ತೆಗೆದುಕೊಂಡು ಠಾಣೆಗೆ ಹೋದರೆ ದಬ್ಬಾಳಿಕೆ ಮಾಡುವವರ ಪರವಾಗಿ ಠಾಣಾ ಪಿಎಸ್‌ಐ ನಿಲ್ಲುತ್ತಾರೆ’ ಎಂದು ಆರೋಪಿಸಿದ ಅವರು, ‘ಇಂತಹ ದುರ್ನಡತೆಯ ಪಿಎಸ್‌ಐ ಅವರನ್ನು ಕೂಡಲೇ ಅಮಾನತುಗೊಳಸಬೇಕು. ಇಲ್ಲದೇ ಹೋದಲ್ಲಿ ಜುಲೈ 22 ರಂದು ಪೊಲೀಸ್‌ ಠಾಣೆ ಎದುರು ಉಗ್ರ ಹೋರಾಟ ಅನಿವಾರ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಇಗಾಗಲೇ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಹಾಗೂ ಐಜಿ ಅವರಿಗೆ ಈ ಕುರಿತು ಮನವಿ ಸಲ್ಲಿಸಲಾಗಿದೆ ಎಂದರು.

ADVERTISEMENT

ಈ ಸಂದರ್ಭದಲ್ಲಿ ಧರ್ಮರಾಜ ಪಾಟೀಲ, ಸಿದ್ದಪ್ಪ ಜಂಬಗಿ, ಶಿವಾನಂದ ಮೇತ್ರಿ, ಬುದ್ದಪ್ಪ ಭೋಸಗಿ, ಮಾದೇವ ಪೂಜಾರಿ, ಶ್ರೀಶೈಲ ತಾಂಬೆ, ಸಿದ್ದರಾಮ ಬಬಲಾದ, ಹಣಮಂತ ಮೇತ್ರಿ, ಭೀಮಣ್ಣ ತಾಂಬೆ, ಸಿದ್ದು ತಾಂಬೆ , ರೇವಣಸಿದ್ದ ಕಂಬಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.