
ಕೊಲ್ಹಾರ: ಮಕ್ಕಳು ಉತ್ತಮ ಗುರಿ ಹೊಂದುವ ಜತೆಗೆ ಮೌಲ್ಯವನ್ನು ರೂಢಿಸಿಕೊಳ್ಳಬೇಕು. ಪಾಲಕರು, ಶಿಕ್ಷಕರು ವಿದ್ಯಾರ್ಥಿಗಳ ಕಾಳಜಿವಹಿಸಿ ಶೈಕ್ಷಣಿಕ ಆಶಯ ಈಡೇರಿಸಬೇಕು ಎಂದು ಅಭಿನವ ಸಂಗನಬಸವ ಶಿವಾಚಾರ್ಯರು ಹೇಳಿದರು.
ತಾಲ್ಲೂಕಿನ ಕೂಡಗಿ ಗ್ರಾಮದ ಜ್ಞಾನ ಭಾರತಿ ಹಿರಿಯ ಮತ್ತು ಪ್ರೌಢ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ 17ನೇ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಾಲಕರು ಮನೆಯಲ್ಲಿ ತಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆಯೇ, ಶಾಲೆಗೆ ಹಾಜರಾಗಿದ್ದಾರೆಯೇ ಎಂದು ಶಾಲೆಯ ಶಿಕ್ಷಕರನ್ನು ಸಂಪರ್ಕಿಸಿ ಖಚಿತ ಮಾಡಿಕೊಳ್ಳಬೇಕು ಎಂದರು.
ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಮನೆಯಲ್ಲಿ ಪೂರಕ ವಾತಾವರಣ ಸೃಷ್ಟಿಸುವುದು ಪೋಷಕರ ಕರ್ತವ್ಯ. ಮಕ್ಕಳ ಸಮಸ್ಯೆ ತಿಳಿದು ಅದನ್ನು ಸರಿಪಡಿಸಲು ಯತ್ನಿಸಬೇಕು ಎಂದು ಜ್ಞಾನ ಭಾರತಿ ಶಾಲೆಯ ಅಧ್ಯಕ್ಷ ಸೋಮು ಸಾಗರ ಹೇಳಿದರು.
ಕೂಡಗಿಯ ಸಮಾಜಶಾಸ್ತ್ರ ಉಪನ್ಯಾಸಕ ಬಸವರಾಜ ಜಾಲವಾದಿ, ಜೀವನದಲ್ಲಿ ದೊಡ್ಡ ಗುರಿಯೊಂದಿಗೆ ಹೆಜ್ಜೆ ಇಡಿ. ಆದರ್ಶ ವ್ಯಕ್ತಿಗಳನ್ನು ಅನುಸರಿಸಿ ಎಂದರು.
ಸಾಹಿತಿ ಗಿರಿಜಾ ಎಸ್. ಪಾಟೀಲ, ಅತಿಥಿ ಉಪನ್ಯಾಸಕರಾದ ಎಂ.ವಿ. ಹಿರೇಮಠ, ನಮ್ಮ ಕರವೇ ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಮಹೇಶಕುಮಾರ ಹರಿಜನ ಮಾತನಾಡಿದರು.
ಅಪೂರ್ವ ಕೆ.ಆರ್. ಪ್ರಾಸ್ತವಿಕವಾಗಿ ಮಾತನಾಡಿದರು.
ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಈಶ್ವರ ಜಾಧವ್, ಮಾಜಿ ಉಪಾಧ್ಯಕ್ಷರಾದ ದ್ಯಾಮವ್ವ ತೋಳಮಟ್ಟಿ, ವೈ.ಕೆ. ಪತ್ತಾರ, ಎಸ್.ಡಿ.ಎಂ.ಸಿ ಸದ್ಯಸರಾದ ಅನ್ನಪೂರ್ಣ ಮಠಪತಿ , ಗ್ರಾಮ ಪಂಚಾಯಿತಿ ಸದಸ್ಯೆ ಕಾಶಿಬಾಯಿ ಉಳ್ಳಾಗಡ್ಡಿ, ಆರಿಫ್ ತಾಳಿಕೋಟಿ, ಶೀತಲ್ ಎಸ್. ಗೌಡ, ಶೃತಿ ಎಸ್. ಗೌಡ, ಶ್ರೀಶೈಲ್ ಎಚ್., ವರ್ಮಿಳಾ, ಸುಪ್ರಿಯಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.