ADVERTISEMENT

ವಿಜಯಪುರ: 'ಈದ್ ಉಲ್ ಫಿತ್ರ್' ಸಂಭ್ರಮ

​ಪ್ರಜಾವಾಣಿ ವಾರ್ತೆ
Published 3 ಮೇ 2022, 6:15 IST
Last Updated 3 ಮೇ 2022, 6:15 IST
ವಿಜಯಪುರ: 'ಈದ್ ಉಲ್ ಫಿತ್ರ್' ಸಂಭ್ರಮ
ವಿಜಯಪುರ: 'ಈದ್ ಉಲ್ ಫಿತ್ರ್' ಸಂಭ್ರಮ   

ವಿಜಯಪುರ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮುಸ್ಲಿಮರು ರಂಜಾನ್ ಅಂಗವಾಗಿ 'ಈದ್-ಉಲ್-ಫಿತ್ರ್' ಅನ್ನು ಮಂಗಳವಾರ ಸಂಭ್ರಮದಿಂದ ಆಚರಿಸಿದರು.

ಹೊಸ ವಸ್ತ್ರ ತೊಟ್ಟು, ಸುಗಂಧ ದ್ರವ್ಯವನ್ನು ಲೇಪಿಸಿಕೊಂಡು, ಟೊಪ್ಪಿ ತೊಟ್ಟು ನಗರದ ದಖನಿ ಈದ್ಗಾ ಮೈದಾನದಲ್ಲಿ ನೆತ್ತಿ ಸುಡುವ ಬಿಸಿಲನ್ನು ಲೆಕ್ಕಿಸದೇ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಕೋವಿಡ್ ಕಾರಣದಿಂದಾಗಿ ಎರಡು ವರ್ಷಗಳಿಂದ ಮನೆಗಷ್ಟೇ ಸೀಮಿತವಾಗಿದ್ದ ಹಬ್ಬವನ್ನು ಈ ಬಾರಿ ಸಾಮೂಹಿಕವಾಗಿ ಆಚರಿಸುವ ಮೂಲಕ ಮುಸ್ಲಿಮರು ಸಂಭ್ರಮಿಸಿದರು. ಸಾಮೂಹಿಕ ಪ್ರಾರ್ಥನೆ ಬಳಿಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ADVERTISEMENT

ನಗರದ ಎಲ್ಲ ಮಸೀದಿಗಳಲ್ಲೂ ಸಾಮೂಹಿಕ ಪ್ರಾರ್ಥನೆಗೆ ವ್ಯವಸ್ಥೆ ಮಾಡಲಾಗಿತ್ತು. ವಿದ್ಯುತ್ ದೀಪಗಳಿಂದ ಆಲಂಕರಿಸಲಾಗಿತ್ತು.

ಬಗೆಬಗೆಯ ಭಕ್ಷ್ಯ ಭೋಜನ, ಬಿರಿಯಾನಿ, ಹಾಲಿನಿಂದ ತಯಾರಿಸಿದ ಸುರುಕುರ್ಮಾ ಸವಿದರು. ಬಂಧು ಬಾಂದವರು, ಸ್ನೇಹಿತರನ್ನು ಮನೆಗೆ ಆಹ್ವಾನಿಸಿ, ಆತಿಥ್ಯ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.