ADVERTISEMENT

‘ಪರಿಸರ ಪ್ರಜ್ಞೆ ಅವಶ್ಯಕ’

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 13:22 IST
Last Updated 1 ಜುಲೈ 2019, 13:22 IST
ವಿಜಯಪುರದ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಈಚೆಗೆ ಸಸಿ ನೆಡಲಾಯಿತು
ವಿಜಯಪುರದ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಈಚೆಗೆ ಸಸಿ ನೆಡಲಾಯಿತು   

ವಿಜಯಪುರ: ‘ಪ್ರತಿಯೊಬ್ಬರಲ್ಲಿ ಪರಿಸರ ಪ್ರಜ್ಞೆ ಇರಬೇಕು. ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು’ ಎಂದು ಮುಖ್ಯ ಶಿಕ್ಷಕಿ ರೆಹಾನಾ ಮನಗೂಳಿ ಹೇಳಿದರು.

ಸಿಕ್ಯಾಬ್ ಶಾಲೆಯ ಆವರಣದಲ್ಲಿ ಈಚೆಗೆ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು, ಅವುಗಳನ್ನು ಮಕ್ಕಳಂತೆ ಪೋಷಿಸಬೇಕು. ಆಧುನಿಕತೆ ಹೆಚ್ಚಾದಂತೆ ಪರಿಸರ ನಾಶವೂ ಹೆಚ್ಚಾಗುತ್ತಿದೆ. ಇದರಿಂದ ಮಾನವ ಕುಲದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮುಂದೊದು ದಿನ ಉತ್ತಮ ಗಾಳಿ ಸಿಗದೆ ತೊಂದರೆ ಎದುರಿಸಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಬೆಳೆಸಬೇಕು’ ಎಂದು ತಿಳಿಸಿದರು.

ADVERTISEMENT

ಫಾತೀಮಾ ಬಡಿಗೇರ, ಜಾಹ್ನವಿ ಸಾವಳಸಂಗ, ಇರ್ಫಾನ್ ನಾಯ್ಕೋಡಿ, ಬಶೀರಾ ಮುಕಬಿನ್, ನಯೀಮ ಉಕ್ಕಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.