ವಿಜಯಪುರ: ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರು, ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ ದಾಖಲಾಗಿರುವ ರೋಗಿಗಳ ಸಂಬಂಧಿಕರಿಗೆ, ಮಕ್ಕಳಿಗೆ ಹಾಗೂಬೀದಿಬದಿ ಭಿಕ್ಷುಕರಿಗೆಹೋಟೆಲ್ ಮಯೂರ ಆದಿಲ್ ಶಾಹಿ ವತಿಯಿಂದ ಆಹಾರ ಪೊಟ್ಟಣಗಳನ್ನು ಭಾನುವಾರ ವಿತರಿಸಲಾಯಿತು.
ಕೋವಿಡ್ ವಾರಿಯರ್ಸ್‌ಗಳಿಗೆ ವಾರದ ಎರಡು ಅಥವಾ ಮೂರು ದಿನಗಳಲ್ಲಿ 100ಕ್ಕೂ ಅಧಿಕ ಆಹಾರ ಪೊಟ್ಟಣ, ಮಾಸ್ಕ್ ಕೊಡಲು ನಿರ್ಧರಿಸಲಾಗಿದೆ ಎಂದು ಹೋಟೆಲ್‌ನವ್ಯವಸ್ಥಾಪಕವ್ಯವಸ್ಥಾಪಕ ಸುನೀಲ್ ಕುಮಾರ್ ಎಸ್. ತಿಳಿಸಿದರು.
ಸಂಕಷ್ಟದಲ್ಲಿರುವ ಭಿಕ್ಷುಕರು, ಅನಾಥರಿಗೂ ಲಾಕ್‌ಡೌನ್ ಮುಗಿಯುವವರೆಗೂ ವಿತರಿಸಲಾಗುವುದು ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.