ADVERTISEMENT

ದತ್ತ ಜಯಂತಿ: ಗಾಣಗಾಪೂರಕ್ಕೆ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 4:48 IST
Last Updated 1 ಡಿಸೆಂಬರ್ 2025, 4:48 IST
ಆಲಮೇಲ ಪಟ್ಟಣದಿಂದ ಗಾಣಗಾಪೂರಕ್ಕೆ ತೆರಳುತ್ತಿರುವ ಪಾದಯಾತ್ರಿಗಳ ಪಲ್ಲಕ್ಕಿಯ ರಥವನ್ನು ಮಹಾದೇವ ಬಂಡಗಾರ ಕುಟುಂಬ‌ ಸದಸ್ಯರು ಸ್ವಾಗತಿಸಿ ಬಿಳ್ಕೋಟ್ಟರು
ಆಲಮೇಲ ಪಟ್ಟಣದಿಂದ ಗಾಣಗಾಪೂರಕ್ಕೆ ತೆರಳುತ್ತಿರುವ ಪಾದಯಾತ್ರಿಗಳ ಪಲ್ಲಕ್ಕಿಯ ರಥವನ್ನು ಮಹಾದೇವ ಬಂಡಗಾರ ಕುಟುಂಬ‌ ಸದಸ್ಯರು ಸ್ವಾಗತಿಸಿ ಬಿಳ್ಕೋಟ್ಟರು   

ಆಲಮೇಲ: ದತ್ತ ಜಯಂತಿ ನಿಮಿತ್ಯ ಮಹಾರಾಷ್ಟ್ರದ ಭಕ್ತರು ದತ್ತಾತ್ರೆಯ ಮೂರ್ತಿಯ ಪಲ್ಲಕಿಯೊಂದಿಗೆ ಪಾದಯಾತ್ರೆ ಮೂಲಕ ಗಾಣಗಾಪೂರಕ್ಕೆ ತೆರಳುತ್ತಿದ್ದಾರೆ. ದತ್ತಾತೆಯ ಪಾದಯಾತ್ರಿಗಳು ಆಲಮೇಲ ಪಟ್ಟಣಕ್ಕೆ ಬಾನುವಾರ ಆಗಮಿಸಿದಾಗ ಸ್ಥಳೀಯ ಭಕ್ತರು ಸ್ವಾಗತಿಸಿದರು.

ಆನಂತರ ಅಫಜಲಪೂರ ರಸ್ತೆಯ ಮಹಾದೇವ ಗೋಪಾಳ ಬಂಡಗಾರ ಇವರ ತೊಟದ ಮನೆಯಲ್ಲಿ ವಾಸ್ತವ್ಯ ಮಾಡಿದರು. ಬಂಡಗಾರ ಕುಟುಂಬ ಭಕ್ತಿಯಿಂದ ಸ್ವಾಗತಿಸಿ ವಿಶೇಷ ಪೂಜೆ ಮಾಡಿ ಬೀಳ್ಕೊಟ್ಟರು. ಬಂಡಗಾರ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆದು ಮದ್ಯಾಹ್ನ ಪ್ರಸಾದ ಸೇವಿಸಿ ಸಂಜೆ 4 ಗಂಟೆಗೆ ಮತ್ತೆ ಪಾದಯಾತ್ರೆ ಮೂಲಕ ದೇವಣಗಾಂವ ಮಾರ್ಗವಾಗಿ ಗಾಣಗಾಪೂರಕ್ಕೆ ತೆರಳಿದರು.

ಪಾದಯಾತ್ರಿಕರು ಮಹಾರಾಷ್ಟ್ರದ ಸೋಲಾಪೂರ ಜಿಲ್ಲೆಯ ಮಾಳಸಿರಸ ನಗರದ ಶ್ರೀ ಗುರುದೇವ ದತ್ತ ಸೇವಾ ಮಂಡಳಿ ನೇತೃತ್ವದಲ್ಲಿ ಮೂರನೆಯ ವರ್ಷ ಹೊಸ ಪಲ್ಲಕ್ಕಿಯೊಂದಿಗೆ ಪಾದಯಾತ್ರೆ ಕೈಗೊಂಡಿದ್ದರು. ಕರ್ನಾಟಕದ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪೂರ ದತ್ತಾತ್ರೇಯ ದರ್ಶನಕ್ಕೆ ತೆರಳುತ್ತಿರುವುದಾಗಿ ಶ್ರೀ ಸೇವಾ ಮಂಡಳಿ ಪ್ರಮುಖ ಪೂಜಾರಿ ದಾದಾ ಮಹಾರಾಜ ತಿಳಿಸಿದರು. ಪಾದಯಾತ್ರೆಯಲ್ಲಿ ಪ್ರಮುಖರಾದ ಬಾರಮತಿಯ ದತ್ತಾತ್ರೆಯ ಗೋರೆ, ವಿಜಯ ಗೊರೆ ಮುಂತಾದವರು ಇದ್ದರು.

ADVERTISEMENT
ಗಾಣಾಗಾಪೂರಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿರುವ ಮಹಾರಾಷ್ಟ್ರದ ಭಕ್ತರು ರವಿವಾರ ಆಲಮೇಲಕ್ಕೆ ಆಗಮಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.