ADVERTISEMENT

ವಿಜಯಪುರ | ಆಂಜನೇಯನ ಬೆಳ್ಳಿ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 6:41 IST
Last Updated 26 ಜನವರಿ 2026, 6:41 IST
ವಿಜಯಪುರದ ಜೈ ಶ್ರೀ ಆಂಜನೇಯ ದೇವಸ್ಥಾನದ 6ನೇ ಜಾತ್ರಾ ಮಹೋತ್ಸವದ ಅಂಗವಾಗಿ ಆಂಜನೇಯನ ಬೆಳ್ಳಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು
ವಿಜಯಪುರದ ಜೈ ಶ್ರೀ ಆಂಜನೇಯ ದೇವಸ್ಥಾನದ 6ನೇ ಜಾತ್ರಾ ಮಹೋತ್ಸವದ ಅಂಗವಾಗಿ ಆಂಜನೇಯನ ಬೆಳ್ಳಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು   

ವಿಜಯಪುರ: ನಗರದ ಎನ್.ಜಿ.ಒ ಕಾಲೊನಿಯಲ್ಲಿರುವ ಜೈ ಶ್ರೀ ಆಂಜನೇಯ ದೇವಸ್ಥಾನದ 6ನೇ ಜಾತ್ರಾ ಮಹೋತ್ಸವದ ಆಂಜನೇಯ ಬೆಳ್ಳಿ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ಶನಿವಾರ ನಡೆಯಿತು.

ಆಂಜನೇಯ ಭಜನೆ, ರಾಮನಾಮ ಪಠಣ ಮತ್ತು ಸಕಲ ವಾದ್ಯಗಳೊಂದಿಗೆ ದೇವಸ್ಥಾನದಿಂದ ಹೊರಟ ಆಂಜನೇಯ ಉತ್ಸವ ಮೂರ್ತಿಯ ಮೆರವಣಿಗೆಯು ನವರಸಪುರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ, ನಂತರ ಪುನಃ ಆಂಜನೇಯ ದೇವಸ್ಥಾನಕ್ಕೆ ಬಂದು ತಲುಪಿತು.

ಮೆರವಣಿಗೆ ಉದ್ಘಾಟಿಸಿದ ಪ್ರೊ.ಎಂ.ಎನ್.ಉಕುಮನಾಳ, ‘ಪ್ರತಿದಿನ ಧ್ಯಾನ, ತಪಸ್ಸು, ಪ್ರಾರ್ಥನೆ, ಮಂತ್ರ ಪಠಣ, ದೇವರ ನಾಮಸ್ಮರಣೆ, ಪುರಾಣ, ಪ್ರವಚನ, ಕೀರ್ತನೆ ಮತ್ತು ಜೀವನ ಸಂದೇಶ ನೀಡುವ ಅಧ್ಯಾತ್ಮದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು’ ಎಂದರು.

ADVERTISEMENT

ದೇವಸ್ಥಾನದ ಅಧ್ಯಕ್ಷ ಸಂತೋಷ ಪಾಟೀಲ, ಅಮ್ಮಣ್ಣ ದಂಧರಗಿ, ಎಸ್.ಎಂ.ಪತ್ತಾರ, ಮಹಾದೇವ ಪಾಟೀಲ, ಎಂ.ಆರ್.ಪಾಟೀಲ, ಶ್ರೀರಾಮ ದೇಶಪಾಂಡೆ, ಪ್ರಭು ಬಳೂಲಗಿಡದ, ವೆಂಕಟೇಶ ವೈದ್ಯ, ಶ್ರೀಶೈಲ ಮಠಪತಿ, ಮನೋಜ ಬಿರಾದಾರ, ಜಗದೀಶ ಅಳ್ಳಗಿ, ಆರ್.ಎಸ್.ತಳವಾರ, ಬಸವರಾಜ ಕನ್ನೂರ ಇದ್ದರು.