ADVERTISEMENT

ವಿಜಯಪುರ: ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 11:39 IST
Last Updated 10 ಆಗಸ್ಟ್ 2020, 11:39 IST
ವಿಜಯಪುರದಲ್ಲಿ ಸೋಮವಾರ ಸುರಿಯುವ ಮಳೆಯಲ್ಲೇ ಜನ ಸಂಚಾರ ಕಂಡುಬಂದಿತು –ಪ್ರಜಾವಾಣಿ ಚಿತ್ರ
ವಿಜಯಪುರದಲ್ಲಿ ಸೋಮವಾರ ಸುರಿಯುವ ಮಳೆಯಲ್ಲೇ ಜನ ಸಂಚಾರ ಕಂಡುಬಂದಿತು –ಪ್ರಜಾವಾಣಿ ಚಿತ್ರ   

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಸೋಮವಾರ ಧಾರಾಕಾರ ಮಳೆ ಸುರಿಯಿತು.

ವಿಜಯಪುರ ನಗರದಲ್ಲಿ ಮಧ್ಯಾಹ್ನ ಮತ್ತು ಸಂಜೆ ಭಾರೀ ಮಳೆ ಸುರಿಯಿತು. ಉಳಿದಂತೆ ಸಿಂದಗಿಯಲ್ಲಿ ಉತ್ತಮ ಮಳೆಯಾಗಿದೆ. ಮುದ್ದೇಬಿಹಾಳ, ಇಂಡಿ, ತಾಂಬಾದಲ್ಲಿ ಜಿಟಿಜಿಟಿ ಮಳೆಯಾಗಿದೆ.

ಬಸವನಬಾಗೇವಾಡಿ 1.8,ಆಲಮಟ್ಟಿ 0.8, ಭೂತನಾಳ 1.6, ಮಮದಾಪೂರ 2.2, ಅಗರಖೇಡ 1.1,ಚಡಚಣ 2, ಝಳಕಿ 2.7, ರಾಮನಹಳ್ಳಿ 4.6 ಮಿ.ಮೀ. ಮಳೆಯಾಗಿದೆ.

ADVERTISEMENT

ಜಿಲ್ಲೆಯಲ್ಲಿ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಹೊಲದಲ್ಲಿ ಬೆಳೆಗೆ ಅನಾನುಕೂಲವಾಗಿದೆ. ತಗ್ಗು ಪ್ರದೇಶದ ಹೊಲದಲ್ಲಿ ನೀರು ನಿಂತ ಪರಿಣಾಮ ಕೊಳೆಯುವ ಸಾಧ್ಯತೆ ಇರುವುದಾಗಿ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.