ADVERTISEMENT

ವಿಜಯಪುರ | ಹೈಟೆಕ್ ಆಯುರ್ವೇದ ಆಸ್ಪತ್ರೆ ಉದ್ಘಾಟನೆ 27ಕ್ಕೆ: ಸಚಿವ ಎಂ.ಬಿ. ಪಾಟೀಲ

ಬಿಎಲ್‌ಡಿಇ ಸಂಸ್ಥೆ ಅಧ್ಯಕ್ಷರಾದ, ಸಚಿವ ಎಂ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 7:33 IST
Last Updated 19 ಜುಲೈ 2025, 7:33 IST
ಎಂ.ಬಿ.ಪಾಟೀಲ
ಎಂ.ಬಿ.ಪಾಟೀಲ   

ವಿಜಯಪುರ: ಬಿಎಲ್‌ಡಿಇ ಡೀಮ್ಡ್‌ ವಿಶ್ವವಿದ್ಯಾಲಯದ ಹೈಟೆಕ್ ಆಯುರ್ವೇದ ಆಸ್ಪತ್ರೆ, ಶೈಕ್ಷಣಿಕ ಭವನ ಹಾಗೂ ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜು ವಿಸ್ತರಣಾ ಘಟಕದ ಉದ್ಘಾಟನಾ ಕಾರ್ಯಕ್ರಮ ಜುಲೈ 27ರಂದು ಬೆಳಿಗ್ಗೆ 8ಕ್ಕೆ ನಡೆಯಲಿದೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಎ.ಐ.ಸಿ.ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಉದ್ಘಾಟಿಸಲಿದ್ದು, ಬೆಂಗಳೂರು ಬೇಲಿಮಠದ ಶಿವಾನುಭ ಚರಮೂರ್ತಿ ಶಿವರುದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.

ಮುಂದಿನ ಯೋಜನೆಗಳು:

ADVERTISEMENT

ಬಸವನಬಾಗೇವಾಡಿ, ದೇವರಹಿಪ್ಪರಗಿ ಮತ್ತು ವಿಜಯಪುರ ನಗರದ ಅಲ್ ಅಮೀನ್ ಮುಂಭಾಗದ ಲಿಂಗರಾಜ ಸಂಸ್ಥೆ ಜಾಗೆಯಲ್ಲಿ ಒಟ್ಟು ಮೂರು ಹೊಸದಾಗಿ ಸಿ.ಬಿ.ಎಸ್.ಇ ಶಾಲೆಗಳನ್ನು ಆರಂಭಿಸಲಾಗುವುದು ಎಂದರು.

ಬಸವನಬಾಗೇವಾಡಿಯಲ್ಲಿ ಬಿಸಿಎ ಮತ್ತು ಬಿ-ಫಾರ್ಮಾ ಕಾಲೇಜುಗಳನ್ನು ಆರಂಭಿಸಲಾಗುವುದು. ಈಗಾಗಲೇ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಬಿ.ಎಲ್.ಡಿ.ಇ– ಅಲೆನ್ ಕರಿಯರ್ ಅಕಾಡೆಮಿಯು 2025-26 ನೇ ಸಾಲಿನಿಂದ ನೀಟ್‌, ಜೆಇಇ, ಕೆ ಸಿಇಟಿ,  ತರಬೇತಿಗಳನ್ನು ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಕಲ್ಪಿಸಲಾಗಿದೆ. ಮೊದಲ ವರ್ಷದಲ್ಲಿಯೇ 372 ವಿದ್ಯಾರ್ಥಿಗಳಿಗೆ ಪ್ರವೇಶ ದೊರೆತಿದೆ. ಪಿಯುಸಿ ಶಿಕ್ಷಣಕ್ಕಾಗಿ ಮಂಗಳೂರು, ಬೆಂಗಳೂರಿಗೆ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಅಲೆದಾಟ ಇಲ್ಲದೆ ಇನ್ನು ಬಿ.ಎಲ್.ಡಿ.ಇ ಅಡಿಯಲ್ಲಿಯೇ ಎಲ್ಲ ಸೌಲಭ್ಯ ದೊರೆಯುತ್ತವೆ ಎಂದರು.

ಬಿಎಲ್‌ಡಿಇ ಡೀಮ್ಡ್‌ ವಿಶ್ವ ವಿದ್ಯಾಲಯದ ಸಮಕುಲಾಧಿಪತಿ‌ ಡಾ.ವೈ.ಎಂ.ಜಯರಾಜ, ಕುಲಪತಿ ಡಾ.ಅರುಣ ಇನಾಮದಾರ, ರಿಜಿಸ್ಟ್ರಾರ್ ಡಾ.ಆರ್.ವಿ.ಕುಲಕರ್ಣಿ, ಬಿ.ಎಲ್.ಡಿ.ಇ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಮಲ್ಲಿಕಾರ್ಜುನ ಶೆಟ್ಟಿ, ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ, ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಪಿ. ಮಂಜುನಾಥ, ಆಸ್ಪತ್ರೆಯ‌ ವೈದ್ಯಕೀಯ ಅಧೀಕ್ಷಕ‌ ರಾ. ರಾಜೇಶ ಹೊನ್ನುಟಗಿ, ಮಹಾಂತೇಶ ಬಿರಾದಾರ ಇದ್ದರು.

- ಬಸವನಬಾಗೇವಾಡಿಯಲ್ಲಿ ಬಿಸಿಎ, ಬಿ-ಫಾರ್ಮಾ ಕಾಲೇಜುಗಳನ್ನು ಆರಂಭ‌ ಬಿ.ಎಲ್.ಡಿ.ಇ ಅಡಿಯಲ್ಲಿಯೇ ಎಲ್ಲ ಸೌಲಭ್ಯ

ಬಿಎಲ್‌ಡಿಇ ಸಂಸ್ಥೆ 115 ವರ್ಷಗಳ ದೀರ್ಘ ಪ್ರಯಾಣದಲ್ಲಿ ಈ ಭಾಗದಲ್ಲಿ ಎಲ್ಲರಿಗೂ ಶಿಕ್ಷಣ ದೊರೆಯುವ ಮೂಲ ಉದ್ದೇಶದ ಜೊತೆಗೆ ಆಧುನಿಕ ಈ ವರ್ಷಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡುವತ್ತ ಸಂಸ್ಥೆ ಮುಂಚೂಣಿಯಲ್ಲಿದೆ 

–ಎಂ.ಬಿ.ಪಾಟೀಲ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.