ADVERTISEMENT

ಬಸವನಬಾಗೇವಾಡಿ: ಸಂಭ್ರಮದ ಹೋಳಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2020, 16:10 IST
Last Updated 9 ಮಾರ್ಚ್ 2020, 16:10 IST
ಬಸವನಬಾಗೇವಾಡಿ ತಾಲ್ಲೂಕಿನ ಡೋಣೂರ ಗ್ರಾಮದಲ್ಲಿ ಹೋಳಿ ಹಬ್ಬದ ಅಂಗವಾಗಿ ಕಾಮಣ್ಣನ ಮೂರ್ತಿ ಪ್ರತಿಷ್ಠಾಪಿಸಿರುವುದು
ಬಸವನಬಾಗೇವಾಡಿ ತಾಲ್ಲೂಕಿನ ಡೋಣೂರ ಗ್ರಾಮದಲ್ಲಿ ಹೋಳಿ ಹಬ್ಬದ ಅಂಗವಾಗಿ ಕಾಮಣ್ಣನ ಮೂರ್ತಿ ಪ್ರತಿಷ್ಠಾಪಿಸಿರುವುದು   

ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಸೋಮವಾರ ಹೋಳಿ ಹಬ್ಬದ ಸಂಭ್ರಮ ಕಂಡುಬಂದಿತು.

ಸಂಜೆ ಕಾಮದಹನ ಮಾಡುವದಕ್ಕಾಗಿ ಕಟ್ಟಿಗೆಯನ್ನು ಸಂಗ್ರಹಿಸಿದ್ದ ಮಕ್ಕಳು, ಯುವಕರು ಕಾಮದಹನದ ಸ್ಥಳವನ್ನು ಸ್ವಚ್ಛಗೊಳಿಸಿ, ರಂಗವಲ್ಲಿ ಚಿತ್ತಾರ ಬಿಡಿಸಿ ಕಟ್ಟಿಗೆ ಜೋಡಿಸಿದರು. ಸೂರ್ಯಾಸ್ತವಾಗುತ್ತಿದ್ದಂತೆಯೇ ಹಲಗೆ ನಾದದೊಂದಿಗೆ ಕಾಮ ದಹನಕ್ಕಾಗಿ ಗಲ್ಲಿಯ ಜನರನ್ನು ಆಹ್ವಾನಿಸಿದರು. ಕಾಮದಹನದ ಸ್ಥಳಕ್ಕೆ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿದ ಬಳಿಕ ಹಲಗೆ ನಾದದೊಂದಿಗೆ ಹೋಳಿ ಹುಣ್ಣಿಮೆ ಹಾಡುಗಳನ್ನು ಹಾಡುತ್ತ ಕಾಮದಹನ ಮಾಡಲಾಯಿತು.

ಪಟ್ಟಣದ ಅಗಸಿ ಒಳಗಡೆ, ಮಹಾರಾಜರ ಮಠದ ಹತ್ತಿರ, ಸಂಗೊಳ್ಳಿ ರಾಯಣ್ಣ ವೃತ್ತ, ಗಣಪತಿ ಚೌಕ್, ಬಸವನಗರ, ಲಕ್ಷ್ಮಿನಗರ, ವೀರಭದ್ರೇಶ್ವರ ನಗರ, ಗಣೇಶ ನಗರ ಸೇರಿದಂತೆ ವಿವಿಧೆಡೆ ಕಾಮದಹನ ಮಾಡಲಾಯಿತು. ಕಾಮದಹನದ ನಂತರ ಅಲ್ಲಲ್ಲಿ ಹೋಳಿ ಹಾಡುಗಳು, ಹಲಗೆ ನಾದದ ಸಂಭ್ರಮ ಕಂಡುಬಂದಿತು.

ADVERTISEMENT

ತಾಲ್ಲೂಕಿನ ಡೋಣೂರ ಗ್ರಾಮದಲ್ಲಿ ಭಾನುವಾರವೇ ಕಾಮಣ್ಣನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.

ಸೋಮವಾರ ರಾತ್ರಿ ಕಾಮಣ್ಣ ಕಲ್ಲಿಗೆ ಸೋತ, ಭೀಮಣ್ಣ ಬಿಲ್ಲಿಗೆ ಸೋತ, ರಾವಣ ಸೋತ ರಣರಂಗದಲ್ಲಿ ಹಾಡು ಸೇರಿದಂತೆ ಹೋಳಿ ಹಾಡು, ಹಂತಿ ಪದಗಳನ್ನು ಹಾಡಿ ಹಲಗೆ ನಾದದೊಂದಿಗೆ ಕಾಮದಹನ ಮಾಡಲಾಯಿತು.

ಸಿದ್ದಪ್ಪ ದುಂಬಾಳಿ, ಸಂಜೀವಪ್ಪ ಕೆರುಟಗಿ, ಭೀಮಪ್ಪ ಅಣಮಿ, ಹನೀಫಸಾಬ್ ಮುಲ್ಲಾ, ವಿಜಯ ಬಿರಾದಾರ, ಶ್ರೀಶೈಲ್ ಕೆರುಟಗಿ, ಮಡಿವಾಳಪ್ಪ ರೂಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.