
ಹೊರ್ತಿ: ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲ್ಲೂಕಿನ ಗುಡ್ಡಾಪುರ ದಾನಮ್ಮದೇವಿ ಕಾರ್ತೀಕ ಮಾಸದ ಜಾತ್ರೆಯು ನ.18ರಿಂದ 21ರವರೆಗೆ ನಡೆಯಲಿವೆ.
ಗುಡ್ಡಾಪುರದ ಸಂಸ್ಥಾನ ಹಿರೇಮಠದ ಗುರುಪಾದ ಸ್ವಾಮೀಜಿ ಹಾಗೂ ಗೌಡಗಾಂವ ಸಂಸ್ಥಾನ ಹಿರೇಮಠದ ಜಯಸಿದ್ಧೇಶ್ವರ ಶಿವಾಚಾರ್ಯರು, ಮನಗೂಳಿ ಸಂಸ್ಥಾನ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು.
ನ.18ರಂದು ಜಾತ್ರೆ ಆರಂಭದ ಅಂಗವಾಗಿ ಬೆಳಿಗ್ಗೆ 10 ಗಂಟೆಗೆ ಗುಡ್ಡಾಪುರದ ಗುರುಪಾದ ಶಿವಾಚಾರ್ಯರು, ಗೌಡಗಾಂವದ ಜಯಸಿದ್ದೇಶ್ವರ ಶಿವಾಚಾರ್ಯರಿಂದ ದಾಸೋಹ ಪೂಜಾ ಕಾರ್ಯಕ್ರಮ ನಡೆಯಲಿದೆ.
ನ.19ರಂದು ಕಾರ್ತಿಕ ಅಮಾವಾಸ್ಯೆ ಪ್ರಯುಕ್ತ ಸಂಜೆ 8 ಗಂಟೆಗೆ ಕಾರ್ತೀಕ ದೀಪೋತ್ಸವ, ನಂತರ ದೇವಿಯ ಪಲ್ಲಕ್ಕಿ ಉತ್ಸವ ಜರುಗಲಿದೆ. ನ.20ರಂದು ಸಂಜೆ 5 ಗಂಟೆಗೆ ದೇವಿಯ ರಥೋತ್ಸವ ನಡೆಯಲಿದೆ. ಕರ್ನಾಟಕ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಜತ್ತ ಶಾಸಕ ಗೋಪಿಚಂದ ಪಡಳಕರ, ಸೋಲಾಪುರ ಶಾಸಕ ವಿಜಯಕುಮಾರ ದೇಶಮುಖ ಭಾಗವಹಿಸುವರು.
ಕಾರ್ಯಕ್ರಮದ ಬಳಿಕ ಸಂಜೆ 8 ಗಂಟೆಗೆ ದೇವಸ್ಥಾನದ ಆವರಣದಲ್ಲಿ ಸತ್ಕಾರ ಸಮಾರಂಭ ಜರುಗಲಿದೆ ಎಂದು ಗುಡ್ಡಾಪುರದ ದಾನಮ್ಮದೇವಿ ದೇವಸ್ಥಾನ ಟ್ರಸ್ಟ್ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ. ಮಾಹಿತಿಗಾಗಿ ಮೊ: 80070 78740, 82752 55109 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.