ADVERTISEMENT

ಇಂಡಿ ಎ.ಸಿಯಾಗಿ ಚಿದಾನಂದ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 5:09 IST
Last Updated 9 ಡಿಸೆಂಬರ್ 2025, 5:09 IST
ಇಂಡಿಯ ಕಂದಾಯ ಉಪವಿಭಾಗಾಧಿಕಾರಿಯಾಗಿ ಚಿದಾನಂದ ಗುರುಸ್ವಾಮಿ ಸೋಮವಾರ ಅಧಿಕಾರ ಸ್ವೀಕರಿಸಿದರು
ಇಂಡಿಯ ಕಂದಾಯ ಉಪವಿಭಾಗಾಧಿಕಾರಿಯಾಗಿ ಚಿದಾನಂದ ಗುರುಸ್ವಾಮಿ ಸೋಮವಾರ ಅಧಿಕಾರ ಸ್ವೀಕರಿಸಿದರು   

ಇಂಡಿ: ಇಂಡಿಯ ಕಂದಾಯ ಉಪವಿಭಾಗಾಧಿಕಾರಿಯಾಗಿ ಚಿದಾನಂದ ಗುರುಸ್ವಾಮಿ ಸೋಮವಾರ ಅಧಿಕಾರಿ ಸ್ವೀಕರಿಸಿದರು.

2014ರ ಕೆ.ಎ.ಎಸ್ ಬ್ಯಾಚ್‌ನವರಾದ ಚಿದಾನಂದ ಇದಕ್ಕೂ ಮುಂಚೆ ಹರಪನಹಳ್ಳಿಯಲ್ಲಿ ಕಂದಾಯ ಉಪವಿಭಾಗಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮೂಲತಃ ಅಥಣಿ ತಾಲ್ಲೂಕಿನ ಶೆಗುಣಶಿ ಗ್ರಾಮದವರು. 

ಈ ಹಿಂದೆ ಇಂಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅನುರಾಧಾ ವಸ್ತ್ರದರವರು ನೂತನ ಕಂದಾಯ ಉಪ ವಿಭಾಗಾಧಿಕಾರಿಗೆ ಸೋಮವಾರ ಅಧಿಕಾರ ಹಸ್ತಾಂತರಿಸಿದರು. ಅವರಿಗೆ ಯಾವುದೇ ಸ್ಥಳ ನಿಯೋಜನೆ ಮಾಡಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.