ADVERTISEMENT

ಸಾಮರಸ್ಯದಿಂದ ಜೀವನ ಸಾಗಿಸಿ: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 8 ಮೇ 2025, 15:15 IST
Last Updated 8 ಮೇ 2025, 15:15 IST
ಬಸವನಬಾಗೇವಾಡಿ ತಾಲ್ಲೂಕಿನ ಅರಳಿಚಂಡಿ ಗ್ರಾಮದ ಗ್ರಾಮದೇವತೆ ಆದಿಶಕ್ತಿದೇವಿ ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮಸಭೆಯನ್ನು ಶಾಸಕ ರಾಜುಗೌಡ ಪಾಟೀಲ ಉದ್ಘಾಟಿಸಿದರು 
ಬಸವನಬಾಗೇವಾಡಿ ತಾಲ್ಲೂಕಿನ ಅರಳಿಚಂಡಿ ಗ್ರಾಮದ ಗ್ರಾಮದೇವತೆ ಆದಿಶಕ್ತಿದೇವಿ ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮಸಭೆಯನ್ನು ಶಾಸಕ ರಾಜುಗೌಡ ಪಾಟೀಲ ಉದ್ಘಾಟಿಸಿದರು    

ಬಸವನಬಾಗೇವಾಡಿ: ‘ಸಂಸಾರದಲ್ಲಿ ಗಂಡು-ಹೆಣ್ಣು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇಬ್ಬರು ಸಾಮರಸ್ಯದಿಂದ ಇದ್ದರೆ ಜೀವನ ಸುಖಮಯವಾಗಿರುತ್ತದೆ’ ಎಂದು ಬಸವನಬಾಗೇವಾಡಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಅರಳಿಚಂಡಿ ಗ್ರಾಮದ ಗ್ರಾಮದೇವತೆ ಆದಿದೇವಿಶಕ್ತಿ ಜಾತ್ರೆಯ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಮಾತನಾಡಿದ ಅವರು, ‘ನಮ್ಮ ದೇಶದಲ್ಲಿ ಮಹಿಳೆಯರಿಗೆ ಅನಾದಿ ಕಾಲದಿಂದಲೂ ಪೂಜನೀಯ ಸ್ಥಾನ ನೀಡಲಾಗಿದೆ. ಪ್ರತಿಯೊಬ್ಬರೂ ಮಹಿಳೆಯರಿಗೆ ಗೌರವ ನೀಡಿದರೆ ನಮ್ಮ ಸಂಸ್ಕೃತಿ ಉಳಿದಂತಾಗುತ್ತದೆ’ ಎಂದರು.

ಸಾನ್ನಿಧ್ಯ ವಹಿಸಿದ್ದ ಇಂಗಳೇಶ್ವರದ ಚನ್ನಬಸವ ಸ್ವಾಮೀಜಿ ಮಾತನಾಡಿ, ‘ದೇವರಲ್ಲಿ ಯಾವಾಗಲೂ ಒಳ್ಳೆಯದನ್ನು ಬೇಡಿಕೊಳ್ಳಬೇಕು. ಪ್ರತಿಯೊಬ್ಬರೂ ಲಿಂಗಾಯತ ಧರ್ಮದ ಆಚರಣೆಯನ್ನು ಮಾಡುವಂತಾಗಬೇಕು’ ಎಂದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದೇವರಹಿಪ್ಪರಗಿ ಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ, ಅಧ್ಯಕ್ಷತೆ ವಹಿಸಿದ್ದ ನಂದಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಸತ್ಯಜೀತ ಪಾಟೀಲ, ಬಸವನಬಾಗೇವಾಡಿ ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ಆದಿಶಕ್ತಿದೇವಿ ಹಿರೇಮಠದ ಟ್ರಸ್ಟ್ ಅಧ್ಯಕ್ಷ ಹಣಮಂತ್ರಾಯ ಸೊನ್ನದ ಮಾತನಾಡಿದರು.

ಇಂಗಳೇಶ್ವರದ ಬೃಂಗೀಶ್ವರ ಶಿವಾಚಾರ್ಯರು, ಜಮಖಂಡಿಯ ಆನಂದ ದೇವರು, ಅರಳಿಚಂಡಿಯ ಮಹಾದೇವಯ್ಯ ಹಿರೇಮಠ, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಕಾಶ ದೇಸಾಯಿ, ಲಕ್ಷ್ಮೀ ಶಾಖಾಪುರ, ತಾಲ್ಲೂಕು ತಳವಾರ ಸಂಘದ ಅಧ್ಯಕ್ಷ ಎಸ್.ಎ.ದೇಗಿನಾಳ, ಶಿಕ್ಷಕ ಮಹೇಶಗೌಡ ಬಿರಾದಾರ, ಗುರಪ್ಪ ದೇವೂರ, ಭೀಮಣ್ಣ ಹೊಸಮನಿ. ಬಿ.ಎಂ.ಮೂಕರ್ತಿಹಾಳ, ಶಿವಯ್ಯ ಹಿರೇಮಠ, ರವಿ ಸೊನ್ನದ, ಎಸ್.ಎಸ್.ಕತ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.