
ವಿಜಯಪುರ: ಬಬಲೇಶ್ವರ ಮತಕ್ಷೇತ್ರ ಬಿಜೆಪಿ ಮುಕ್ತವಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದರು.
ನಗರದ ಸಚಿವರ ಗೃಹ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕನಮಡಿ ಗ್ರಾಮದ ಬಿಜೆಪಿ ಮುಖಂಡ ಪ್ರಶಾಂತ ಸುಭಾಸಗೌಡ ಪಾಟೀಲ ಮತ್ತು ಅವರ ಬೆಂಬಲಿಗರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು.
ಬಬಲೇಶ್ವರ ಮತಕ್ಷೇತ್ರದಲ್ಲಿ ಬಿಜೆಪಿಯ ಅರ್ಧದಷ್ಟು ನಾಯಕರು ಮತ್ತು ಕಾರ್ಯಕರ್ತರು ಕಾಂಗ್ರೆಸ್ ಸೇರಲಿದ್ದಾರೆ. ಆರು ಬ್ಯಾಚ್‌ಗಳಲ್ಲಿ ಈಗ ಒಂದು ಬ್ಯಾಚ್ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದೆ. ಕನಮಡಿಯ ಸುಭಾಸಗೌಡ ಪಾಟೀಲ ಅವರ ಪುತ್ರ ಪ್ರಶಾಂತ ಸುಭಾಸಗೌಡ ಪಾಟೀಲ ಅವರು ಕಾಂಗ್ರೆಸ್ ಸೇರ್ಪಡೆಯಾಗಿ ಮರಳಿ ಮನೆಗೆ ಬಂದಿದ್ದಾರೆ. ಅವರಿಗೆ ಸ್ವಾಗತ ಕೋರುತ್ತೇನೆ. ಕನಮಡಿ ಗೌಡರ ಮನೆತನದ ಸಂಬಂಧಿಕರು ಜಿಲ್ಲೆಯಾದ್ಯಂತ ಇದ್ದಾರೆ. ಅವರಿಂದ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದರು.
ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಕನಮಡಿ ಮುಖಂಡ ಪ್ರಶಾಂತ ಸುಭಾಸಗೌಡ ಪಾಟೀಲ ಮಾತನಾಡಿದರು.
ಇಲಾಯಿ ತಿಕೋಟಿ , ವಿನೋಬಗೌಡ ಬಿರಾದಾರ, ಅಶೋಕ ಬಿರಾದಾರ, ಮುಬಾರಕ ಮುಲ್ಲಾ, ರಾಜು ತಿಕೋಟಿ, ದಾವಲ್ ಪಾರ್ಥನಹಳ್ಳಿ, ಜಾಕಿರ ತಿಕೋಟಿ, ಅಪ್ಪಾಸಾಬ ಮೋರೆ, ಅಲ್ಲಿಸಾಬ್ ಬೈಲಹೊಂಗಲ, ನಿಂಗಪ್ಪಾ ಶೀಳಿನ, ಹೂವಣ್ಣ ನಾಟಿಕಾರ, ಬಸಪ್ಪ ರಾಮತೀರ್ಥ, ರಾಯಪ್ಪ ನಾಟಿಕಾರ, ಮೈಬೂಬಸಾಬ್ ಮುಲ್ಲಾ ಸೇರಿದಂತೆ 120ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು.
ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ, ಮುಖಂಡ ಅಬ್ದುಲ ಹಮೀದ್ ಮುಶ್ರಿಫ್, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಗಂಗಾಧರ ಸಂಬಣ್ಣಿ, ಟಪಾಲ್ ಎಂಜಿನಿಯರ್, ಸಿದಗೊಂಡ ರುದ್ರಗೌಡ, ವಿದ್ಯಾರಾಣಿ ತುಂಗಳ, ಜಮೀರ್ ಅಹ್ಮದ್ ಬಕ್ಷಿ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.