ವಿಜಯಪುರ: ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟ ಭಾನುವಾರ 26ನೇ ದಿನ ಪೂರೈಸಿತು.
ಕರ್ನಾಟಕ ರಾಜ್ಯ ಮುಲ್ಲಾ ಅಸೋಷಿಯೇಷನ್ ಹಾಗೂ ಜಮಖಂಡಿ ಮಹಿಳಾ ಸಂಘಟನೆಗಳ ಒಕ್ಕೂಟ ಧರಣಿಯಲ್ಲಿ ಪಾಲ್ಗೊಂಡು, ಬೆಂಬಲ ವ್ಯಕ್ತಪಡಿಸಿದರು.
ಜಮಖಂಡಿಯ ಕಾರ್ಮೆಲ್ ಆಶಿಸ್ ಚಾರಿಟಬಲ್ ಟ್ರಸ್ಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉನ್ನತಿ ಸ್ವ ಸಹಾಯ ಸಂಘ, ಕೀರ್ತಿ ಸ್ವ ಸಹಾಯ ಸಂಘ, ವಿಜಯಲಕ್ಷ್ಮೀ ಸ್ವ ಸಹಾಯ ಸಂಘ, ಸಂವಿಧಾನ ಶಿಲ್ಪಿ ಭೀಮರಾವ್ ಸ್ವ ಸಹಾಯ ಸಂಘ, ಹೊಸಬೆಳಕು ಸ್ವ ಸಹಾಯ ಸಂಘ, ದುರ್ಗಾದೇವಿ ಸ್ವ ಸಹಾಯ ಸಂಘ, ಪ್ರಗತಿ ಸ್ವ ಸಹಾಯ ಸಂಘ, ಸಾವಿತ್ರಿಬಾಯಿ ಪುಲೆ ಸ್ವ ಸಹಾಯ ಸಂಘ ಪದಾಧಿಕಾರಿಗಳು, ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವಂತೆ ಒತ್ತಾಯಿಸಿದರು.
ಕಾರ್ಮೆಲ್ ಆಶಿಸ್ ಚಾರಿಟೇಬಲ್ ಟ್ರಸ್ಟಿನ ಯೋಜನಾ ಸಂಯೋಜಕ ಜಯಾ ರಾಜು ಪಿಳ್ಳೈ ಮಾತನಾಡಿ, ಸರ್ಕಾರ ಏಕೆ ವಿಜಯಪುರಕ್ಕೆ ಅನ್ಯಾಯ ಮಾಡ್ತಾ ಇದೆ ತಿಳಿಯುತ್ತಿಲ್ಲ. ಎಲ್ಲಾ ಶಾಸಕರು ಒಂದಾಗಿ ಸರ್ಕಾರಕ್ಕೆ ಮನವರಿಕೆ ಮಾಡಿ ಆದಷ್ಟು ಬೇಗ ಸರ್ಕಾರಿ ವೈದ್ಯಕೀಯ ಕಾಲೇಜು ವಿಜಯಪುರದಲ್ಲಿ ಪ್ರಾರಂಭಿಸಬೇಕು ಎಂದು ಅವರು ಆಗ್ರಹಿಸಿದರು.
ಟ್ರಸ್ಟಿನ ಸಂಯೋಜಕ ಸುಮಿತ್ರಾ ಬೋರಗಿ ಮಾತನಾಡಿ, ಜಮಖಂಡಿಯಿಂದ ಕೂಡ ಜನರು ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಇಷ್ಟು ಸುಸಜ್ಜಿತವಾದ 150 ಎಕರೆ ಇರುವಂತ ಜಿಲ್ಲಾ ಆಸ್ಪತ್ರೆ ಇರುವಾಗ ಯಾಕೆ ನೀವು ಖಾಸಗಿ-ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ತರುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದರು.
ಕರ್ನಾಟಕ ರಾಜ್ಯ ಮುಲ್ಲಾ ಅಸೋಷಿಯೇಶನ್ ರಾಜ್ಯ ಉಪಾಧ್ಯಕ್ಷ ಇಮ್ತಿಯಾಜ್ ಮುಲ್ಲಾ ಮಾತನಾಡಿ, ಜಿಲ್ಲಾ ಉಸ್ತುವಾರಿ ಎಂ.ಬಿ.ಪಾಟೀಲರು ಇದನ್ನ ಗಂಭೀರವಾಗಿ ಪರಿಗಣಿಸಿ ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವಲ್ಲಿ ಮುತುವರ್ಜಿ ವಹಿಸಬೇಕು ಎಂದು ಹೇಳಿದರು.
ಜಮಖಂಡಿಯ ಕಾರ್ಮೆಲ್ ಚಾರಿಟಬಲ್ ಟ್ರಸ್ಟಿನ ಜಯಾ ರಾಜು ಪಿಳ್ಳೈ, ಸುಮಿತ್ರಾ ಬೋರಗಿ, ವಿದ್ಯಾಶ್ರೀ ಕಾಂಬ್ಳೆ, ಸುವರ್ಣ ಹರಿಜನ, ಲಲಿತಾ ಕಡಿಯಪ್ಪ, ಕಸ್ತೂರಿ ಕಾಂಬ್ಳೆ, ಶಶಿಕಲಾ ಕಾಂಬ್ಳೆ, ಪ್ರೀತಿ ಕಾಂಬ್ಳೆ, ರುಕ್ಮಿಣಿ ಕಾಂಬ್ಳೆ, ರೂಪಾ ಕಾಂಬ್ಳೆ, ಗೀತಾ ಕಾಂಬ್ಳೆ, ಸರಸ್ವತಿ ಕಾಂಬ್ಳೆ, ಪುಲಾಬಾಯಿ ಮಾದರ, ಶಂಬಲಾ ಮಾದರ, ಮಂಗಳಾ ಕಾಂಬ್ಳೆ, ಗೀತಾ ಕಾಂಬ್ಳೆ, ಸುಮವ್ವಾ ಕಾಂಬ್ಳೆ, ರಾಜಶ್ರೀ ಮಗಾಡಿ, ನಿಂಗವ್ವ ಸಿಂಗಿ, ರಾಜಶ್ರೀ ಕಾಗಿ, ತೇಜಸ್ವಿನಿ ಕಾಂಬ್ಳೆ, ಸುನಿತಾ ಕಾಂಬ್ಳೆ, ಸುನಿಲ್ ಕಾಂಬ್ಳೆ, ಇಮ್ತಿಯಾಜ್ ಮುಲ್ಲಾ, ಅಬೂಬಕರ್ ಮುಲ್ಲಾ, ಬಂದೆ ನವಾಜ್ ಮುಲ್ಲಾ, ಇಮಾಂಸಾಬ್ ಮುಲ್ಲಾ, ನಬಿಸಾಬ್ ಮುಲ್ಲಾ, ರಿಜ್ವಾನ್ ಅಹ್ಮದ್, ಮೊಹಮ್ಮದ್ ಯೂಸುಫ್ ಮುಲ್ಲಾ, ರಫೀಕ್ ಮುಲ್ಲಾ, ಐ.ಎಂ. ಮುಲ್ಲಾ, ಎ. ಎಂ.ಮುಲ್ಲಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.