ADVERTISEMENT

ಸುದ್ದಿ ಸ್ವಾರಸ್ಯ: 300 ಜನಸಂಖ್ಯೆ ಇರುವ 500 ಮನೆಗಳಿಗೆ ವಿದ್ಯುತ್‌ ಸಂಪರ್ಕ!

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 16:03 IST
Last Updated 15 ಸೆಪ್ಟೆಂಬರ್ 2022, 16:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಜಯಪುರ: ‘ಇದು ನಮ್ಮ ಸಂಸದರಿಂದ ಮಾತ್ರ ಸಾಧ್ಯ. 300 ಜನಸಂಖ್ಯೆ ಇರುವ 500 ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು..’

ಇಂತಹದೊಂದು ಒಕ್ಕಣೆಯೊಂದಿಗೆ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರು ಇಂಡಿ ಉಪ ವಿಭಾಗದ ಹೆಸ್ಕಾಂ ಎಂಜಿನಿಯರ್‌ಗೆ ಬರೆದಿದ್ದಾರೆ ಎನ್ನಲಾಗುವ ಪತ್ರವನ್ನು ಟ್ಯಾಗ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.

‘ಝಳಕಿ ಗ್ರಾಮದ ವಿಠಲ ನಗರದಲ್ಲಿ 300ಕ್ಕೂ ಹೆಚ್ಚು ಜನಸಂಖ್ಯೆ ಇದ್ದು, 500 ಮನೆಗಳು ಇರುತ್ತವೆ. ಇಲ್ಲಿ ಸರಿಯಾಗಿ ವಿದ್ಯುತ್‌ ಸಂಪರ್ಕವಿಲ್ಲದೇ ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ ಎಂದು ದೂರು ಸಲ್ಲಿಸಿರುತ್ತಾರೆ. ಈ ವಿಠಲ ನಗರದ ನಿವಾಸಿಗಳು ವಿದ್ಯುತ್‌ ಸಂಪರ್ಕದ ಕುರಿತು ತೀವ್ರವಾಗಿ ಪರಿಶೀಲಿಸಿ, ವಿದ್ಯುತ್‌ ಸಂಪರ್ಕವನ್ನು ನೀಡಲು ಕೋರುತ್ತೇನೆ’ ಎಂಬ ಸಂಸದ ರಮೇಶ ಜಿಗಜಿಣಗಿ ಅವರ ಪತ್ರ ಸಾಮಾಜಿಕ ಜಾಲತಾಣದಲ್ಲಿ ನಗುವಿಗೆ ಕಾರಣವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.