ಮುದ್ದೇಬಿಹಾಳ: ಮೇ 29ರಿಂದ ಶಾಲೆಗಳು ಆರಂಭವಾಗಲಿದ್ದು, ಪುಸ್ತಕರ ವಿತರಣೆಗೂ ಸಿದ್ಧತೆ ನಡೆದಿದೆ. ಆದರೆ, ಇಲ್ಲಿ ಪುಸ್ತಕಗಳನ್ನು ಸಂಗ್ರಹಿಸಿರುವ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿರುವ ಗೋದಾಮು ಸೋರುತ್ತಿದೆ.
ನೀರು ಬಿದ್ದು ಪುಸ್ತಕಗಳು ಹಾಳಾಗುವ ಸಾಧ್ಯತೆ ಇದೆ. ಗೋದಾಮು ದುರಸ್ತಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ಪುಸ್ತಕ ವಿತರಣಾ ವಿಭಾಗದ ವ್ಯವಸ್ಥಾಪಕಿ ಪಿ.ಎ. ಬಾಳಿಕಾಯಿ ತಿಳಿಸಿದರು.
‘ಗೋದಾಮು ದುರಸ್ತಿ ಮಾಡಿಸಲು ಅನುದಾನ ಒದಗಿಸುವಂತೆ ಕೋರಿ ತಾಲ್ಲೂಕು ಪಂಚಾಯಿತಿಗೆ ಪತ್ರ ಬರೆಯಲಾಗುವುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಸಾವಳಗಿ ಹೇಳಿದರು.
ಸರ್ಕಾರಿ ಪ್ರೌಢಶಾಲೆ, ಪ್ರಾಥಮಿಕ ಶಾಲೆಗಳ ಬಿಸಿಯೂಟದ ಕೋಣೆಗಳು ಸಹ ಮಳೆ ಬಂದರೆ ಸೋರುತ್ತಿದ್ದು, ಆಹಾರ ಧಾನ್ಯಗಳು ಹಾಳಾಗುತ್ತವೆ. ಸರ್ಕಾರಿ ಪ್ರೌಢಶಾಲೆಯ ಆವರಣವು ಮಳೆಯಿಂದಾಗಿ ಕೆಸರುಮಯವಾಗಿದೆ.
ಪಟ್ಟಣದ ಕೆಬಿಎಂಪಿಎಸ್ ಶಾಲೆಯನ್ನು ಉನ್ನತೀಕರಿಸುವ ಕಾರ್ಯ ನಡೆದಿದ್ದು, ಕೊಠಡಿಗಳನ್ನು ಅತ್ಯಾಧುನಿಕವಾಗಿ ನಿರ್ಮಿಸಲಾಗಿದೆ. ಆದರೆ, ಕಾಂಪೌಂಡ್‌ಗಾಗಿ ಅಗೆದಿದ್ದ ಅಗೆದಿದ್ದ ಮಣ್ಣನ್ನು ಸಮತಟ್ಟುಗೊಳಿಸುವ ಕೆಲಸ ಆಗಿಲ್ಲ.
ತಾಲ್ಲೂಕಿಗೆ ಬೇಡಿಕೆಯಂತೆ 8 ಲಕ್ಷ ಪಠ್ಯಪುಸ್ತಕಗಳ ಪೂರೈಕೆ ಮಾಡಬೇಕಿತ್ತ. ಈವರೆಗೆ 5 ಲಕ್ಷ ಪಠ್ಯಪುಸ್ತಕಗಳನ್ನು ಪೂರೈಕೆ ಮಾಡಲಾಗಿದೆ.ಅದರಲ್ಲಿ 125 ಶಾಲೆಗಳಿಗೆ ಪುಸ್ತಕಗಳನ್ನು ಪೂರೈಸಲಾಗಿದ್ದು ಹಂತ ಹಂತವಾಗಿ ಉಳಿದೆಲ್ಲ ಶಾಲೆಗಳಿಗೆ ಪೂರೈಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಸಾವಳಗಿ ಹೇಳಿದರು. ‘6 ಲಕ್ಷ ಪುಸ್ತಕಗಳನ್ನು ಉಚಿತವಾಗಿ 2 ಲಕ್ಷ ಪುಸ್ತಕಗಳನ್ನು ಅನುದಾನರಹಿತ ಶಾಲೆಗಳಿಗೆ ಮಾರಾಟ ಮಾಡಲಾಗುವುದು. ಕನ್ನಡ ಭಾಷೆಯ ಪುಸ್ತಕಗಳಲ್ಲಿ ಶೇ 30ರಷ್ಟು ಉರ್ದು ಭಾಷೆಯ ಪುಸ್ತಕಗಳಲ್ಲಿ ಶೇ 40ರಷ್ಟು ಪೂರೈಕೆಯಾಗಬೇಕಿದೆ’ ಎಂದು ಪಠ್ಯಪುಸ್ತಕ ವಿತರಣಾ ಜವಾಬ್ದಾರಿ ವಹಿಸಿಕೊಂಡಿರುವ ಪಿ.ಎ.ಬಾಳಿಕಾಯಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.