
ನಾಲತವಾಡ: ಸಮೀಪದ ನಾಗರಬೆಟ್ಟದ ಶ್ರೀ ದತ್ತಾತ್ರೇಯ ವಿದ್ಯಾವರ್ಧಕ ಸಂಘದ ಆಕ್ಸ್‌ಫರ್ಡ್ಸ್ ಪಾಟೀಲ್ಸ್ ಸೈನ್ಸ್ ಪಿಯು ಕಾಲೇಜಿನ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜೆಇಇ ಸೆಷನ್-1 ಮುಖ್ಯ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ್ದಾರೆ.

ವಿದ್ಯಾರ್ಥಿಗಳಾದ ಅಭಿಷೇಕ ಎಸ್. ಟಕ್ಕಳಕಿ (ಶೇ 99.28), ಅದಿತಿ ಎನ್. ಸವಣೂರ (ಶೇ 99.23), ಪ್ರೀತಮ್ ಆನಂದ ಲಮಾಣಿ (ಶೇ 99.12), ಗಾಯತ್ರಿ ಎಂ. ಶಿಂಧೆ (ಶೇ 98.32), ಮಾನಸ ವಿ. ಹಿರೇಮಠ (ಶೇ 98.04), ಅಜೀತ್ ಮಲ್ಲಪ್ಪ ಬೆಳ್ಳುಬ್ಬಿ (ಶೇ 97.94), ಭಾಗ್ಯಶ್ರೀ ಎಂ. ಬಸರಕೋಡ (ಶೇ 97.6), ಮಾನಸಾ ಹುಲ್ಯಾಳ (ಶೇ 97.46), ಶರತ್ ಎಸ್.ಗಬಸಾವಳಗಿ (ಶೇ 97.46), ವರ್ಷಾ ವಿ.ಯರಗಟ್ಟಿ (ಶೇ 97.23), ಸುಮಿತ್ ಅರುಣ್ ಪತ್ತಾರ (ಶೇ 97.16), ಪ್ರತೀಕ್ಷಾ ರಾಜೀವ್ ಕುಂಬಾರ (ಶೇ 96.83), ಸ್ಪೂರ್ತಿ ಎಸ್.ಚೌಡಕಿ (ಶೇ 96.81), ಭಾಗ್ಯ ಪಿ. ಹೊಸಮನಿ (ಶೇ 96.7), ಮಹ್ಮದಇಬ್ರಾಹಿಂ ಎ. ವಾಲಿಕಾರ (ಶೇ 96.66), ಚಿನ್ಮಯಿ ಆರ್.ನೇಗಿನಹಾಳ (ಶೇ 96.17), ಸುದರ್ಶನ ಜೆ.ಕುಲಕರ್ಣಿ (ಶೇ 96.14), ಸಿದ್ಧಾರ್ಥ ಎಸ್. ಕಡಿ (ಶೇ 96.14) ಪರ್ಸೆಂಟೈಲ್ ಗಳಿಸಿದ್ದಾರೆ.
ರಾಜೇಶ್ವರಿ ಎಸ್. ಕೋಲಕಾರ (ಶೇ 95.92), ಸಂಪತ್ ಎಸ್. ಕಟ್ಟಿಮಠ (ಶೇ 95.74), ಗಾಯತ್ರಿ ಎಂ. ಪಾಟೀಲ (ಶೇ 95.6), ವಿಕಾಸ್ ಕ್ಷತ್ರಿ (ಶೇ 95.56), ಅಪರ್ಣಾ ಎಸ್. ಲಚ್ಯಾಣ (ಶೇ 95.09), ಅಮಸಿದ್ಧ ವಿ. ಪೂಜಾರಿ (ಶೇ 95.08), ಮಲ್ಲಿಕಾರ್ಜುನ ಗುಬ್ಬೇವಾಡ (ಶೇ 95.06), ಪವನ್ ಐ. ಹಿರೇಮಠ (ಶೇ 95.06), ಅಕ್ಷತಾ ಜಿ ಪೂಜೇರ್ (ಶೇ 95.01) ಹೆಚ್ಚು ಅಂಕ ಗಳಿಸಿ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್.ಪಾಟೀಲ, ಆಡಳಿತಾಧಿಕಾರಿ ಅಮಿತಗೌಡ ಪಾಟೀಲ, ‘ನಮ್ಮ ಕಾಲೇಜು ಮೆಡಿಕಲ್ ಶಿಕ್ಷಣಕ್ಕೆ ವಿದ್ಯಾರ್ಥಿಗಳನ್ನು ತಯಾರು ಮಾಡುವುದು ಮಾತ್ರವಲ್ಲದೆ, ಜೆಇಇ ಅಂಥ ಉನ್ನತ ಶಿಕ್ಷಣಕ್ಕೂ ವಿದ್ಯಾರ್ಥಿಗಳನ್ನು ತಯಾರು ಮಾಡುವ ಸಾಮರ್ಥ್ಯ ಹೊಂದಿರುವುದು ಈ ಫಲಿತಾಂಶದಿಂದ ಸಾಬೀತಾಗಿದೆ’ ಎಂದರು.
ನಮ್ಮಲ್ಲಿ ನೀಟ್, ಜೆಇಇಗೆ ಪ್ರತ್ಯೇಕ ತರಬೇತಿ ನೀಡಲಾಗುತ್ತದೆ. ನೀಟ್, ಜೆಇಇಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ವಿಶೇಷ ಕಾಳಜಿ ವಹಿಸುವ ಮೂಲಕ ಅತ್ಯುತ್ತಮ ಮಾರ್ಗದರ್ಶನ ದೊರೆಯುವಂತೆ ಮಾಡಲಾಗುತ್ತದೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮದ ಜೊತೆಗೆ ಸ್ಮಾರ್ಟನೆಸ್ ಕೂಡ ಇದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಾಧನೆ ತೋರಿದ ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆಯ ಪರಿವಾಗಿ ಅಭಿನಂದಿಸುತ್ತೇವೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.