ADVERTISEMENT

‘ಶಿಸ್ತಿಗೆ ಎನ್‌ಸಿಸಿ ಸಹಕಾರಿ’

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 12:42 IST
Last Updated 24 ಜೂನ್ 2019, 12:42 IST
ವಿಜಯಪುರದ ವಿಶ್ವಭಾರತಿ ಮಾದರಿ ಪ್ರೌಢಶಾಲೆಯಲ್ಲಿ ಈಚೆಗೆ ಆಯೋಜಿಸಿದ್ದ ಎನ್‌ಸಿಸಿ ಘಟಕದ ಪ್ರಾರಂಭೋತ್ಸವದಲ್ಲಿ ಕರ್ನಲ್ ಅಭಿಜಿತ್ ಮೇಲಂಕರ್ ಅವರನ್ನು ಸನ್ಮಾನಿಸಲಾಯಿತು
ವಿಜಯಪುರದ ವಿಶ್ವಭಾರತಿ ಮಾದರಿ ಪ್ರೌಢಶಾಲೆಯಲ್ಲಿ ಈಚೆಗೆ ಆಯೋಜಿಸಿದ್ದ ಎನ್‌ಸಿಸಿ ಘಟಕದ ಪ್ರಾರಂಭೋತ್ಸವದಲ್ಲಿ ಕರ್ನಲ್ ಅಭಿಜಿತ್ ಮೇಲಂಕರ್ ಅವರನ್ನು ಸನ್ಮಾನಿಸಲಾಯಿತು   

ವಿಜಯಪುರ: ‘ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ಬೆಳೆಸಲು, ಉತ್ತಮ ನಾಗರಿಕರನ್ನಾಗಿ ರೂಪಿಸಲು ಎನ್‌ಸಿಸಿ ಸಹಕಾರಿಯಾಗಿದೆ’ ಎಂದು ಕರ್ನಾಟಕ ಬಟಾಲಿಯನ್‌ನ ಕರ್ನಲ್‌ ಅಭಿಜಿತ್ ಮೇಲಂಕರ್ ಹೇಳಿದರು.

ನಗರದ ವಿಶ್ವಭಾರತಿ ಮಾದರಿ ಪ್ರೌಢಶಾಲೆಯಲ್ಲಿ ಸೋಮವಾರ ಎನ್‌ಸಿಸಿ ಘಟಕದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಎನ್‌ಸಿಸಿಯಲ್ಲಿ ಒಳ್ಳೆಯ ತರಬೇತಿಯನ್ನು ಪಡೆದರೆ ಕರ್ನಾಟಕ ಮತ್ತು ಗೋವಾ ರಾಜ್ಯಗಳನ್ನು ಪ್ರತಿನಿಧಿಸಿ, ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಳ್ಳಬಹುದಾಗಿದೆ’ ಎಂದು ತಿಳಿಸಿದರು.

ADVERTISEMENT

ಶೀಲಾ ಎಸ್.ಬಿರಾದಾರ ಮಾತನಾಡಿ, ‘ಎನ್‌ಸಿಸಿಯು ಸೈನ್ಯಕ್ಕೆ ಸೇರಲು ಉತ್ತಮ ತರಬೇತಿಯನ್ನು ನೀಡುತ್ತದೆ. ಶಿಸ್ತು, ಒಳ್ಳೆಯ ವ್ಯಕ್ತಿತ್ವ, ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ. ಶಾರೀರಕವಾಗಿ ಮತ್ತು ಮಾನಸಿಕವಾಗಿ ಸದೃಢರನ್ನಾಗಿಸುತ್ತದೆ’ ಎಂದರು.

ಸುಬೇದಾರ್ ಪಾಂಡುರಂಗ ಗವಾಸ ಅವರನ್ನು ಸನ್ಮಾನಿಸಲಾಯಿತು.

ಎಸ್.ಎ.ಹುಗ್ಗಿ, ಎ.ಎಚ್.ಸಗರ, ಪ್ರವೀಣ ಗೆಣ್ಣೂರ, ವಿವೇಕ ವೈಶಂಪಾಯನ, ಭಾರತಿ ಪಾಟೀಲ ಇದ್ದರು. ಶಿಕ್ಷಕಿ ಮೊಹಸಿನಾ ಇನಾಮದಾರ ನಿರೂಪಿಸಿ, ಮಹಮ್ಮದ್ ಇಲಿಯಾಸ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.