ADVERTISEMENT

ಇಂಡಿ: ಕಂದಾಯ ಹಕ್ಕು ಪತ್ರ ನೋಂದಣಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 2:43 IST
Last Updated 7 ಫೆಬ್ರುವರಿ 2026, 2:43 IST
<div class="paragraphs"><p>ಇಂಡಿ &nbsp;ಉಪನೋಂದಣಾಧಿಕಾರಿ ಅಂಜಲಿ. ಸಿ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ನೋಂದಣಿ ಪ್ರತಿ ನೀಡಿದರು&nbsp;</p></div>

ಇಂಡಿ  ಉಪನೋಂದಣಾಧಿಕಾರಿ ಅಂಜಲಿ. ಸಿ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ನೋಂದಣಿ ಪ್ರತಿ ನೀಡಿದರು 

   

ಇಂಡಿ: ಸರ್ಕಾರದ ಆದೇಶ ಪರಿಪಾಲನೆ ಪ್ರತಿ ನೌಕರರ ಆದ್ಯ ಕರ್ತವ್ಯ. ಅದರ ಜೊತೆಗೆ ಫಲಾನುಭವಿಗಳಿಗೆ ಒಳ್ಳೆಯದಾಗಲಿ ಎಂದು ಭಾನುವಾರ ಕೂಡಾ ರಜೆ ಮಾಡದೇ ಕಂದಾಯ ಗ್ರಾಮ ರಿಜಿಸ್ಟರ್ ಮಾಡಲಾಗುತ್ತಿದೆ ಎಂದು ಉಪನೋಂದಣಾಧಿಕಾರಿ ಅಂಜಲಿ.ಸಿ ಹೇಳಿದರು.

ಅವರು ಶುಕ್ರವಾರ ನಗರದ ಉಪ ನೋಂದಣಿ ಕಚೇರಿಯಲ್ಲಿ ಕಂದಾಯ ಹಕ್ಕು ಪತ್ರ ನೋಂದಣಿ ಕಾರ್ಯಕ್ರಮದಲ್ಲಿದ್ದ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
ಅನೇಕ ವರ್ಷಗಳಿಂದ ಕೆಲ ಗ್ರಾಮಗಳು ಯಾವುದೇ ಹಕ್ಕುಪತ್ರಗಳಿಲ್ಲದೇ ವಂಚಿತವಾಗಿದ್ದವು. ಸಾರ್ವಜನಿಕರಿಗೆ ನಿವೇಶನ ಹೊಂದಿದ ಜನರಿಗೆ ಸರ್ಕಾರ ಕಂದಾಯ ಗ್ರಾಮಗಳು ಮಾಡಿರುವುದರಿಂದ ಫಲಾನುಭವಿಗಳಿಗೆ ಆತ್ಮಸ್ಥೆರ್ಯ ತುಂಬಿದಂತಾಗಿದೆ. ಜ. 29 ರಿಂದ ಪ್ರಾರಂಭವಾದ ಕಂದಾಯ ಗ್ರಾಮದ ನೋಂದಣಿ ಫೆಬ್ರುವರಿ 7ರವರೆಗೆ ಮುಕ್ತಾಯವಾಗುವ ಸಾಧ್ಯತೆ ಇದೆ ಎಂದರು.

ADVERTISEMENT

‘ಒಟ್ಟು 901 ರಲ್ಲಿ 531 ಖರೀದಿಗಳು ಆಗಿವೆ. ಇನ್ನುಳಿದ ಕಂದಾಯ ಗ್ರಾಮಗಳ ರಜಿಸ್ಟರ್ ಕೂಡಾ ತುರ್ತು ಮಾಡಿಕೊಡಲಾಗುವುದು ಎಂದು ಸಬ್ ರಿಜಿಸ್ಟಾರ್ ಅಂಜಲಿ ಹೇಳಿದರು.
ಬಳ್ಳೊಳ್ಳಿ ಕಂದಾಯ ಅಧಿಕಾರಿ ಪಂಡಿತ ಕೊಡಹೊನ್ನ ,ತಹಶೀಲ್ದಾರ ಕಾರ್ಯಾಲಯದ ಶಿರ ಸ್ತೇದಾರ ಎಸ್.ಆರ್ ಮುಜಗೊಂಡ , ಬಸನಾಳ ಗ್ರಾಮದ ಗ್ರಾಮ ಸಹಾಯಕ ಸಿಕಿಂದರ್ , ಗ್ರಾಮ ಸಹಾಯಕ ಹುಸೇನಿ ಜಿಗಜಿಣಗಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.