ADVERTISEMENT

ಕುಂಟೋಜಿ ಪೈಲ್ವಾನ್ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 14:29 IST
Last Updated 25 ಜುಲೈ 2024, 14:29 IST
ಕುಂಟೋಜಿ ಪೈಲ್ವಾನ್ ಶ್ರೀಕಾಂತ
ಕುಂಟೋಜಿ ಪೈಲ್ವಾನ್ ಶ್ರೀಕಾಂತ   

ಮುದ್ದೇಬಿಹಾಳ : ರಾಜ್ಯ,ಅಂತರಾಜ್ಯಮಟ್ಟದ ಭಾರ ಎತ್ತುವ ಸ್ಪರ್ಧೆಗಳಲ್ಲಿ ಭಾಗವಹಿಸಿ ತಾಲ್ಲೂಕಿನ ಕೀರ್ತಿ ಹೆಚ್ಚಿಸಿದ್ದ ತಾಲ್ಲೂಕಿನ ಕುಂಟೋಜಿ ಗ್ರಾಮದ ಪೈಲ್ವಾನ್ ಶ್ರೀಕಾಂತ ವಾಲಪ್ಪ ನಾಯಕ(33)  ಗುರುವಾರ ನಿಧನರಾದರು.

ಶ್ರೀಕಾಂತ ಅವರಿಗೆ ಪತ್ನಿ,ಪುತ್ರ,ಪುತ್ರಿ ಇದ್ದಾರೆ.

‘ತಾಲ್ಲೂಕಿನ ಹಗರಗುಂಡ ತಾಂಡಾಕ್ಕೆ ತಮ್ಮ ಸಂಬಂಧಿಕರನ್ನು ಬಿಟ್ಟು ಬರಲು ತೆರಳಿದ್ದ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿದೆ’ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.ಅವರ ಅಂತ್ಯಕ್ರಿಯೆ ಜು.26 ರಂದು ಕುಂಟೋಜಿಯಲ್ಲಿ ನಡೆಯಲಿದೆ.

ADVERTISEMENT

‘ಶ್ರೀಕಾಂತ ಅವರು, ಜಾತ್ರೆ, ಉತ್ಸವಗಳಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆಂದರೆ ಅಲ್ಲಿ ಪ್ರಥಮ ಬಹುಮಾನ ಅವರಿಗೆ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿತ್ತು.230 ಕೆ.ಜಿ. ತೂಕದ ಉಸುಕಿನ ಚೀಲ ಎತ್ತುವ ಮೂಲಕ ರಾಜ್ಯದಲ್ಲೇ ವಿಶೇಷ ಸ್ಥಾನವನ್ನು ಅವರು ಪಡೆದಿದ್ದರು’ ಎಂದು ಅವರ ಸ್ನೇಹಿತ ಶಿವರಾಜ ನಾಗೂರ ನೆನಪಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.