ADVERTISEMENT

PUC Results | ನಾಗರಬೆಟ್ಟ ಎಕ್ಸ್‌ಫರ್ಟ್ ಕಾಲೇಜು ಉತ್ತಮ ಸಾಧನೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 15:37 IST
Last Updated 8 ಏಪ್ರಿಲ್ 2025, 15:37 IST
ಸರಸ್ವತಿ
ಸರಸ್ವತಿ   

ಮುದ್ದೇಬಿಹಾಳ: ತಾಲ್ಲೂಕಿನ ನಾಗರಬೆಟ್ಟದ ಆಕ್ಸ್‌ಫರ್ಡ್‌ ಮಠ್ಸ್ ಶಿಕ್ಷಣ ಸಂಸ್ಥೆಯ ಎಕ್ಸ್‌ಫರ್ಟ್ ಪಿಯು ಕಾಲೇಜು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದೆ.

ವಾಣಿಶ್ರೀ ಹಳ್ಳದ ಶೇ 97.83 ತಾಲ್ಲೂಕಿಗೆ ಪ್ರಥಮ, ಅಡಿವೆಪ್ಪ ಹನಮಸಾಗರ ಶೇ 96.50 ದ್ವಿತೀಯ, ಸರಸ್ವತಿ ಕರೆಕಲ್ ಶೇ 96.16 ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕಾಲೇಜಿನ ಒಟ್ಟು 340 ವಿದ್ಯಾರ್ಥಿಗಳಲ್ಲಿ 46 ವಿದ್ಯಾರ್ಥಿಗಳು ಶೇ 90ಕ್ಕಿಂತ ಹೆಚ್ಚು ಅಂಕ, 66 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 200 ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಮಠ, ಕಾರ್ಯದರ್ಶಿ ಸಿದ್ದಯ್ಯ ಮಠ, ಪ್ರಾಚಾರ್ಯ ಇರ್ಫಾನ ಬಾಗವಾನ್, ಸದಸ್ಯರಾದ ಪ್ರಜ್ವಲ್‌ ಮಠ, ಕಾಲೇಜಿನ ಸಿಬ್ಬಂದಿ ಅಭಿನಂದಿಸಿದ್ದಾರೆ.

ADVERTISEMENT
ಅಡಿವೆಪ್ಪ
ವಾಣಿಶ್ರೀ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.