ADVERTISEMENT

ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ವಿಜಯಪುರ ದಂಪತಿ ರಮೇಶ, ಸರಸ್ವತಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 19:31 IST
Last Updated 31 ಡಿಸೆಂಬರ್ 2020, 19:31 IST
ತಮ್ಮ ಪುಟ್ಟ ಮಗಳೊಂದಿಗೆ ಕೊರೊನಾ ವಾರಿಯರ್ಸ್‌ ದಂಪತಿ ರಮೇಶ, ಸರಸ್ವತಿ
ತಮ್ಮ ಪುಟ್ಟ ಮಗಳೊಂದಿಗೆ ಕೊರೊನಾ ವಾರಿಯರ್ಸ್‌ ದಂಪತಿ ರಮೇಶ, ಸರಸ್ವತಿ   

ಕೊರೊನಾ ಸಂಕಷ್ಟದ ಸಮಯದಲ್ಲಿ ನಾವು ಐದು ವರ್ಷದ ಮಗುವನ್ನು ಪಕ್ಕದ ಮನೆಯಲ್ಲಿ‌ ಬಿಟ್ಟು ಒಂದೂವರೆ ತಿಂಗಳು ಕೆಲಸ ಮಾಡಿದೆವು.

ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಕೊವಿಡ್ ಸೊಂಕಿತರನ್ನು ಚಿಕಿತ್ಸೆಗೆ ಸಾಗಿಸಲು ನಮ್ಮ ಆಂಬುಲೆನ್ಸ್‌ ಆಯ್ಕೆ ಮಾಡಲಾಯಿತು. ಆಲ್ ಅಮಿನ್‌ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪತ್ನಿ ಕೂಡ ಕೊರೊನಾ ವಾರ್ಡ್‌ನಲ್ಲಿ ಕಾರ್ಯ ನಿರ್ವಹಿಸಬೇಕಾಯಿತು.

ನಮ್ಮ ಐದು ವರ್ಷದ ಪುತ್ರಿ ಹನಿಷ್ಕಾಳನ್ನು ತಿಕೋಟಾದ ತಮ್ಮ ಪಕ್ಕದ ಮನೆಯ ಸಣ್ಣಜ್ಜಿ ಮನೆಯಲ್ಲಿ ಬಿಡುತ್ತಿದ್ದೆವು. ಮಗಳು ದಿನಾಲು ವಿಡಿಯೊ ಕಾಲ್ ಮಾಡಿ ‘ಬೇಗ ಬನ್ನಿ ಪಪ್ಪಾ, ಮಮ್ಮಿ’ ಅಂತಾ ಕಣ್ಣೀರಿಡುತ್ತಿದ್ದಳು...ಈಗಲೂ ನೆನಪಿಸಿಕೊಂಡರೆ ಕಣ್ಣೀರಾಗುತ್ತೇವೆ.

ADVERTISEMENT
ತಮ್ಮ ಪುಟ್ಟ ಮಗಳೊಂದಿಗೆ ಕೊರೊನಾ ವಾರಿಯರ್ಸ್‌ ದಂಪತಿ ರಮೇಶ, ಸರಸ್ವತಿ

ತಿಕೋಟಾ ಭಾಗದ ಯಾವುದಾದರೂ ಕೋವಿಡ್ ಸೋಂಕಿತರನ್ನು ತರಲು ವಿಜಯಪುರದಿಂದ ಬಂದಾಗ ಪಕ್ಕದ‌ ಮನೆಯವರಿಗೆ ಕರೆ ಮಾಡಿ ಮಗಳನ್ನು ಕರೆದುಕೊಂಡು ರಸ್ತೆಯ ಬದಿಯಲ್ಲಿ‌ ನಿಲ್ಲಲು ಹೇಳುತ್ತಿದ್ದೆವು. ಪಿಪಿಇ ಕಿಟ್‌ ಧರಿಸಿರುತ್ತಿದ್ದರಿಂದ ಮಗಳಿಗೆ ಆಂಬುಲೆನ್ಸ್‌ಲ್ಲಿರುತ್ತಿದ್ದ ನಮ್ಮನ್ನು ಗುರುತಿಸುವುದು ಸಾಧ್ಯವಾಗುತ್ತಿರಲಿಲ್ಲ.

–ರಮೇಶ, ಸರಸ್ವತಿ ದಂಪತಿ, ತಿಕೋಟಾ, ವಿಜಯಪುರ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.