ಇಂಡಿ: ಶಾಸಕ ಯಶವಂತರಾಯಗೌಡ ಪಾಟೀಲ ಅವರು ಬುಧವಾರ ಪಟ್ಟಣದಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಿಸಿದರು.
ಪಟ್ಟಣದ ಅಗರಖೇಡ ರಸ್ತೆಯಲ್ಲಿರುವ ಶಾಂತು ಧನಶೆಟ್ಟಿ ಅವರಿಗೆ ಸೇರಿದ ಎರಡು ದೊಡ್ಡ ಗೋಡಾನುಗಳು ನೆಲ ಅಂತಸ್ತಿನಲ್ಲಿದ್ದು, ಅಲ್ಲಿದ್ದ ಎಲ್ಲ ಕೃಷಿಗೆ ಉಪಯೋಗಿಸುವ ಗೊಬ್ಬರ, ಇತರೆ ಔಷಧಿ ಸಾಮಾನುಗಳು ಸಂಪೂರ್ಣ ನೀರಿನಲ್ಲಿದ್ದುದು ವೀಕ್ಷಿಸಿದರು.
ಆ ಪ್ರದೇಶದಲ್ಲಿ ಅಂದಾಜು 10ಕ್ಕೂ ಹೆಚ್ಚು, ನೆಲ ಅಂತಸ್ತಿನರುವ ಅಂಗಡಿಗಳಲ್ಲಿ ಮಳೆ ನೀರು ಬಂದಿದೆ. ಅದರಲ್ಲೂ ಒಂದೇ ದಿನ ಪಟ್ಟಣದಲ್ಲಿ 50 ಮಿ.ಮಿ ಮಳೆಯಾಗಿದ್ದು, ಆ ನೀರು ಮಳಿಗೆಗಳಲ್ಲಿ ತುಂಬಿಕೊಂಡಿದೆ. ಅದರಂತೆ ರೇವಪ್ಪನ ಮಡ್ಡಿಯಲ್ಲಿರುವ ನೀರು, ಇಂಡಿ ಹೊರವಲಯದ ಕಲ್ಲೂರ ಪೆಟ್ರೋಲ ಪಂಪ್ ಹತ್ತಿರ ಇಂಡಿ ಅಗರಖೇಡ ಮೇಲೆ ಬಂದು, ನೀರು ಹರಿದು ಹೋಗಲು ಜಾಗವಿಲ್ಲದೆ ರಸ್ತೆಯ ಮೇಲೆ ನಿಂತು ರಸ್ತೆ ಬಂದ ಆಗಿರುವದು ವೀಕ್ಷಿಸಿ ಅದನ್ನು ಲೋಕೋಪಯೋಗಿ ಇಲಾಖೆ ಮತ್ತು ಪುರಸಭೆಗೆ ಶಾಸ್ವತ ಪರಿಹಾರ ಮಾಡಬೇಕೆಂದು ಎಇಇ ದಯಾನಂದ ಮಠ ಮತ್ತು ಮುಖ್ಯಾಧಿಕಾರಿ ಸಿದ್ರಾಮ ಕಟ್ಟಿಮನಿ ಇವರಿಗೆ ಸೂಚನೆ ನೀಡಿದರು.
ಅದಲ್ಲದೇ ಸರ್ಕಾರಿ ಪ್ರೌಢಶಾಲೆಗೆ ಹಳೆ ಬೊಳೆಗಾಂವ ರಸ್ತೆಯಿಂದ ಮತ್ತು ಹಿರೇ ಇಂಡಿ ರಸ್ತೆಯಿಂದ ರಸ್ತೆ ಸಂಪೂರ್ಣ ಹಾಳಾಗಿರುವದನ್ನು ವೀಕ್ಷಿಸಿದರು.
ಕಂದಾಯ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ, ತಹಶೀಲ್ದಾರ ಬಿ.ಎಸ್.ಕಡಕಬಾವಿ, ಕೃಷಿ ಸಹಾಯಕ ನಿದರ್ೇಶಕ ಮಹಾದೇವಪ್ಪ ಏವೂರ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ದಯಾನಂದ ಮಠ, ಪುರಸಭೆ ಮುಖ್ಯಾಧಿಕಾರಿ ಸಿದ್ರಾಮ ಕಟ್ಟಿಮನಿ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ವಲಯ ಅರಣ್ಯಾಧಿಕಾರಿ ಎಸ್.ಜಿ.ಸಂಗಾಲಕ, ಶಾಂತು ಧನಶೆಟ್ಟಿ , ಮಹಾವೀರ ಧನಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.