ADVERTISEMENT

ಹೊಸ ಮನೆಗೆ ಹೆಗಡೆ-ಪಟೇಲ್ ಹೆಸರು ನಾಮಕರಣ ಮಾಡಿದ ಬಿಜೆಪಿ ಸಂಸದ ರಮೇಶ ಜಿಗಜಿಣಗಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2020, 7:04 IST
Last Updated 29 ಆಗಸ್ಟ್ 2020, 7:04 IST
ಸಂಸದ ರಮೇಶ ಜಿಗಜಿಣಗಿ ಅವರು ಹೊಸ ಮನೆಗೆ ರಾಮಕೃಷ್ಣ ಹೆಗಡೆ- ಜೆ.ಎಚ್. ಪಟೇಲ್ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.
ಸಂಸದ ರಮೇಶ ಜಿಗಜಿಣಗಿ ಅವರು ಹೊಸ ಮನೆಗೆ ರಾಮಕೃಷ್ಣ ಹೆಗಡೆ- ಜೆ.ಎಚ್. ಪಟೇಲ್ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.    
""
""

ವಿಜಯಪುರ: ಸಂಸದ ರಮೇಶ ಜಿಗಜಿಣಗಿ ಅವರು ತಾವು ಕಟ್ಟಿಸಿರುವ ಹೊಸ ಮನೆಗೆ ಮಾಜಿ ಮುಖ್ಯ ಮಂತ್ರಿಗಳಾದ ರಾಮಕೃಷ್ಣ ಹೆಗಡೆ- ಜೆ.ಎಚ್. ಪಟೇಲ್ ಅವರ ಹೆಸರನ್ನು ನಾಮಕರಣ ಮಾಡಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ಹೆಗಡೆ-ಪಟೇಲ್ ನನ್ನ ಪಾಲಿಗೆ ಮಹಾನಾಯಕರು. ಅವರ ಸ್ಮರಣೆಗಾಗಿ, ನಾನು ನನ್ನ ಸ್ವತಃ ಶ್ರಮದಿಂದ ಕಟ್ಟಿಸಿರುವ ಮನೆಗೆ ಮಹಾನಾಯಕರ ಹೆಸರನ್ನು ನಾಮಕರಣ ಮಾಡಿದ್ದೇನೆ ಎಂದರು.

ಇಬ್ಬರೂ ನಾಯಕರು ತಮ್ಮ ಮಕ್ಕಳಿಗೆ ರಾಜಕಾರಣದಲ್ಲಿ ಪ್ರೀತಿ ಕೊಟ್ಟರೂ, ಇಲ್ಲವೊ ಗೊತ್ತಿಲ್ಲ. ಆದರೆ, ನನಗೆ ರಾಜಕಾರಣದಲ್ಲಿ ಪ್ರೀತಿ ಕೊಟ್ಟಿದ್ದಾರೆ. ಹೀಗಾಗಿ ಇಬ್ಬರು ಮಹಾಶಯರ ಹೆಸರನ್ನು ಹೊಸ ಮನೆಗೆ ನಾಮಕರಣ ಮಾಡಿದ್ದೇನೆ ಎಂದರು.

ADVERTISEMENT

ಹೊಸ ಮನೆ ನಿರ್ಮಿಸಿ ಆರೇಳು ತಿಂಗಳಾಗಿತ್ತು. ಇಂದು ರಾಮಕೃಷ್ಣ ಹೆಗಡೆ ಅವರ ಜನುಮ ದಿನವಾದ ಕಾರಣ ಒಳ್ಳೆಯ ದಿನವೆಂದು ಪೂಜೆ ಮಾಡಿ, ನಾಮ ಫಲಕ ಅಳವಡಸಿದ್ದೇನೆ. ಮುಂದಿನ ದಿನಗಳಲ್ಲಿ ಶಿಲೆಯಲ್ಲಿ ಇಬ್ಬರ ಹೆಸರನ್ನು ಕೆತ್ತಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.