ವಿಜಯಪುರ: ನಗರದ ಅಲ್ಪಸಂಖ್ಯಾತರ ಕಾಲೊನಿಗಳ ರಸ್ತೆ ಹಾಗೂ ಒಳಚರಂಡಿ ಅಭಿವೃದ್ಧಿಗಾಗಿ 2024-25ನೇ ಸಾಲಿನ ಅಲ್ಪಸಂಖ್ಯಾತರ ಕಾಲೊನಿಗಳ ಅಭಿವೃದ್ಧಿ ಯೋಜನೆ ಮತ್ತು ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆಯಡಿ 5 ಕೋಟಿ ಅನುದಾನ ಮಂಜೂರಾಗಿದ್ದು, ಈ ಪೈಕಿ ಮೊದಲ ಕಂತು ₹1.5 ಕೋಟಿ ಅನುದಾನ ಬಿಡುಗಡೆಗೊಂಡಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.
ಸುಹಾಗ ಕಾಲೊನಿಯ ಆಂತರಿಕ ರಸ್ತೆಗಳ ಅಭಿವೃದ್ಧಿ, ತ್ರಿಮೂರ್ತಿ ನಗರದ ಆಂತರಿಕ ರಸ್ತೆಗಳ ಅಭಿವೃದ್ಧಿ, ಗಣೇಶ ನಗರ ಮುಖ್ಯ ರಸ್ತೆಯ ವಿ.ಆರ್.ಎಲ್ ಆಫೀಸ್‌ನಿಂದ ರಿಂಗ್ ರಸ್ತೆವರೆಗಿನ ರಸ್ತೆ ಅಭಿವೃದ್ಧಿ, ಕನ್ನನ್ ನಗರ ಹತ್ತಿರದ ಪೂರ್ವಭಾಗ ಹಾಗೂ ಪಶ್ಚಿಮ ಭಾಗದ ಜಯಲಕ್ಷ್ಮೀ ನಗರದ ಆಂತರಿಕ ರಸ್ತೆಗಳ ಅಭಿವೃದ್ಧಿ, ಬಾರಾಕಮಾನ್ ಹಿಂದಿನ ಭಾಗದ ರಸ್ತೆ ಅಭಿವೃದ್ಧಿ, ಕಲಾಲ ಗಲ್ಲಿಯ ಆಂತರಿಕ ರಸ್ತೆಗಳು ಹಾಗೂ ಕುಲ್ಲೋಳ್ಳಿ ಪೆಟ್ರೋಲ್ ಪಂಪ್‌ನಿಂದ ಖಮರುದ್ದಿನ್ ಮಸೀದಿ ಮೂಲಕ ವಾಜಪೇಯಿ ರಸ್ತೆ ವರೆಗಿನ ರಸ್ತೆ ಅಭಿವೃದ್ಧಿ ಮಾಡಲಾಗುವುದು ಎಂದರು.
ಅತಾಲಟ್ಟಿ ಮುಖ್ಯ ರಸ್ತೆಯಿಂದ ಮದೀನಾ ನಗರದ ವರೆಗೆ ರಸ್ತೆ ಅಭಿವೃದ್ಧಿ, ಮದೀನಾ ನಗರದಿಂದ ಸಾಯಿ ನಗರದ ವರೆಗೆ ಹಾಗೂ ಆಂತರಿಕ ರಸ್ತೆಗಳ ಅಭಿವೃದ್ಧಿ, ಅತಾಲಟ್ಟಿ ಮುಖ್ಯ ರಸ್ತೆಯಿಂದ ಮದೀನಾ ನಗರ ಮೂಲಕ ಸಾಯಿ ನಗರದ ಆಂತರಿಕ ರಸ್ತೆಗಳು, ಒಳಚರಂಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.