ADVERTISEMENT

ತಾಳಿಕೋಟೆ | ಜಾತ್ರೆಗಳು ಸಂಸ್ಕೃತಿಯ ಪ್ರತಿಬಿಂಬ: ಶಾಂತಗೌಡ ಪಾಟೀಲ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 4:59 IST
Last Updated 8 ಫೆಬ್ರುವರಿ 2026, 4:59 IST
ತಾಳಿಕೋಟೆ ತಾಲ್ಲೂಕಿನ ಹಡಗಿನಾಳ ಗ್ರಾಮ ದೇವತೆ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಮುಖಂಡ ಶಾಂತಗೌಡ ಪಾಟೀಲ(ನಡಹಳ್ಳಿ) ಶುಕ್ರವಾರ ಉದ್ಘಾಟಿಸಿದರು 
ತಾಳಿಕೋಟೆ ತಾಲ್ಲೂಕಿನ ಹಡಗಿನಾಳ ಗ್ರಾಮ ದೇವತೆ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಮುಖಂಡ ಶಾಂತಗೌಡ ಪಾಟೀಲ(ನಡಹಳ್ಳಿ) ಶುಕ್ರವಾರ ಉದ್ಘಾಟಿಸಿದರು    

ತಾಳಿಕೋಟೆ: ಜಾತ್ರೆ, ಹಬ್ಬಗಳು ನಮ್ಮ ನಾಡಿನ ಗ್ರಾಮೀಣ ಸಂಸ್ಕೃತಿ ಮತ್ತು ನಮ್ಮ ಪರಂಪರೆ ಪ್ರತಿಬಿಂಬಿಸುವ ಕಾರ್ಯಕ್ರಮಗಳಾಗಿವೆ ಎಂದು ಶಾಂತಗೌಡ ಪಾಟೀಲ(ನಡಹಳ್ಳಿ) ಹೇಳಿದರು.

ತಾಲ್ಲೂಕಿನ ಹಡಗಿನಾಳ ಗ್ರಾಮ ದೇವತೆ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ‘ಮಾತು ಬಿದ್ದಿತು, ಮೌನ ಗೆದ್ದಿತು’ ನಾಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ತಾಯಂದಿರು, ಪೋಷಕರು ಮಕ್ಕಳಿಗೆ ಶಿಕ್ಷಣದೊಂದಿಗೆ ಒಳ್ಳೆಯ ಸಂಸ್ಕಾರಗಳನ್ನು ಕೊಡಲು ಪ್ರಯತ್ನಿಸಬೇಕು. ಸಂಸ್ಕಾರಯುತ ವ್ಯಕ್ತಿ ಮಾತ್ರ ದೇಶದ ಒಳ್ಳೆಯ ಪ್ರಜೆ ಆಗಲು ಸಾಧ್ಯ ಎಂದರು.

ADVERTISEMENT

ಪುರಸಭೆ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ ಮಾತನಾಡಿ, 9 ವರ್ಷಗಳ ನಂತರ ಗ್ರಾಮದಲ್ಲಿ ಎಲ್ಲರೂ ಒಂದಾಗಿ ಈ ಜಾತ್ರೆಯನ್ನು ಆಚರಿಸುತ್ತಿರುವುದು ಸಂತಸದ ವಿಷಯ. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಮರೆಯದಿರಿ ಎಂದರು.

ಉಪನ್ಯಾಸಕ ಮಲ್ಲಿಕಾರ್ಜುನ ದೇಶಮಾನ್ಯ ಮಾತನಾಡಿದರು. ಪ್ರಮುಖರಾದ ನಿಂಗನಗೌಡ ದೇಸಾಯಿ, ಶಿವರಾಜ ಗುಂಡಕನಾಳ, ವೀರೇಶ ಬಾಗೇವಾಡಿ, ಬಸವರಾಜ ಕುಂಬಾರ, ಸಂಗನಗೌಡ ಅಸ್ಕಿ, ಸಂಗಮೇಶ ದೇಸಾಯಿ, ಮಲ್ಲಿಕಾರ್ಜುನ ಮದರಕಲ್ಲ, ಮಹಾದೇವಪ್ಪಗೌಡ ದೇಸಾಯಿ, ಶಿವಕುಮಾರ ದೇಶಮಾನ್ಯ, ಕಾಶಿನಾಥ ದೇಸಾಯಿ, ಶಾಂತಗೌಡ ದೇಸಾಯಿ, ಗೌಡಪ್ಪಗೌಡ ದೇಸಾಯಿ, ಚನ್ನಪ್ಪಗೌಡ ದೇಸಾಯಿ, ಸಿಂಧೂರಲಕ್ಷ್ಮಣ ವಾಲೀಕಾರ ಇದ್ದರು. ಐಶ್ವರ್ಯ ದೇಶಮಾನ್ಯ ಪ್ರಾರ್ಥಿಸಿದರು. ಭಾಗ್ಯಾ ತಾಳಿಕೋಟಿ ಭಕ್ತಿ ಗೀತೆ ಹಾಡಿದರು. ಶಿವಕುಮಾರ ದೇಶಮಾನ್ಯ ನಿರೂಪಿಸಿದರು. ಶಿಕ್ಷಕಿ ವಿದ್ಯಾಶ್ರೀ ಡಿ.ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.