ADVERTISEMENT

ಜನಪದ ಅಳಿದರೆ ಸಂಸ್ಕೃತಿ ಮೂಕಾದಂತೆ: ಎಂ.ಸಿ. ಮನಗೂಳಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 16:31 IST
Last Updated 24 ನವೆಂಬರ್ 2020, 16:31 IST
ತಾಂಬಾ ಗ್ರಾಮದ ವೀರಭದ್ರೇಶ್ವರ ಭಜನಾ ಕಲಾ ತಂಡ ಮತ್ತು ನ್ಯೂ ದೆಹಲಿ ಸಂಗೀತ ನಾಟಕ ಅಕಾಡಮಿ ಸಹಯೋಗದೊಂದಿಗೆ ನಡೆದ ಜಾನಪದ ಭಜನಾ ಕಾರ್ಯಕ್ರಮಕ್ಕೆ ಸಿಂದಗಿ ಶಾಸಕ ಎಂ.ಸಿ. ಮನಗೂಳಿ ಚಾಲನೆ ನೀಡಿದರು
ತಾಂಬಾ ಗ್ರಾಮದ ವೀರಭದ್ರೇಶ್ವರ ಭಜನಾ ಕಲಾ ತಂಡ ಮತ್ತು ನ್ಯೂ ದೆಹಲಿ ಸಂಗೀತ ನಾಟಕ ಅಕಾಡಮಿ ಸಹಯೋಗದೊಂದಿಗೆ ನಡೆದ ಜಾನಪದ ಭಜನಾ ಕಾರ್ಯಕ್ರಮಕ್ಕೆ ಸಿಂದಗಿ ಶಾಸಕ ಎಂ.ಸಿ. ಮನಗೂಳಿ ಚಾಲನೆ ನೀಡಿದರು   

ತಾಂಬಾ: ಜಾನಪದ ಸಂಸ್ಕೃತಿ ನೀಡುವ ಭಾಷೆಯಾಗಿದೆ. ಬದುಕಿನ ಮೌಲ್ಯಗಳನ್ನು ಬಿತ್ತರಿಸಲು ಜಾನಪದ ಸಹಕಾರಿಯಾಗಲಿದ್ದು, ಅದು ಅಳಿದರೆ ಸಂಸ್ಕೃತಿ ಮೂಕಾದಂತೆ. ಜಾನಪದ ಕಟ್ಟುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಸಿಂದಗಿ ಶಾಸಕ ಎಂ.ಸಿ. ಮನಗೂಳಿ ಹೇಳಿದರು.

ಮಂಗಳವಾರ ಗ್ರಾಮದ ವೀರಭದ್ರೇಶ್ವರ ದೇವಸ್ಥಾನಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರರಸ್ಕೃತ ಶ್ರೀ ವೀರಭದ್ರೇಶ್ವರ ಭಜನಾ ಕಲಾ ತಂಡ ಮತ್ತು ನ್ಯೂ ದೆಹಲಿ ಸಂಗೀತ ನಾಟಕ ಅಕಾಡಮಿ ಅವರ ಸಹಯೋಗದೊಂದಿಗೆ ನಡೆದ ಜಾನಪದ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಿಜಯಪುರ ಜಿಲ್ಲೆಯಲ್ಲಿ ಪ್ರಾಚೀನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ನಡೆಯಬೇಕಿದೆ. ಹಿಂದಿನ ಹಿರಿಯರು ಹಾಡು, ಗಾದೆ, ಒಗಟು, ನುಡಿಗಟ್ಟುಗಳ ಮೂಲಕ
ಬದುಕಿನಲ್ಲಿ ಉನ್ನತವಾದ ಮೌಲ್ಯಗಳನ್ನು ಬಿಟ್ಟು ಹೋಗಿದ್ದಾರೆ. ಅವುಗಳನ್ನು ರಕ್ಷಿಸುವ ಹೊಣೆ ನಮ್ಮದಾಗಿದೆ ಎಂದರು.

ಬಂಥನಾಳದ ವೃಷಭಲಿಂಗೇಶ್ವರ ಶ್ರೀಗಳು ಮಾತನಾಡಿ, ಜಾನಪದ ಕಲೆ ಉಳಿಯಬೇಕಾದರೆ ಕಲಾವಿದರನ್ನು ನಾವು ಮೇಲಕ್ಕೆತ್ತಬೇಕು, ಇಲ್ಲವಾದಲ್ಲಿ ಅದು ನಿಧಾನವಾಗಿ ನಶಿಸಿ ಹೊಗುತ್ತದೆ. ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಸದಸ್ಯ ಸುಭಾಸ ಕಲ್ಲೂರ, ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಕಾಶ ಮುಂಜಿ, ವೃಷಭಲಿಗೇಶ್ವರ ವಿದ್ಯಾವರ್ಧಕ ಸಂಘದ ಚೇರ್ಮನ್‌
ಜೆ.ಎಸ್.ಹತ್ತಳ್ಳಿ, ಹಿರಿಯ ಮುಖಂಡ ಜಿ.ವೈ.ಗೊರನಾಳ, ಡಿ.ಎಸ್.ಗುಡೋಡಗಿ, ಗುರುಸಂಗಪ್ಪ ಬಾಗಲಕೋಟ, ಆರ್.ಎಸ್.ಪೂಜಾರಿ, ಈರಣ್ಣ ಪತ್ತಾರ, ಚಿದಾನಂದ ಗೌಡಗಾವಿ, ರೇವಪ್ಪ ಹೋರ್ತಿ, ರಾಯಗೊಂಡ ಕನಾಳ, ಷಣ್ಮುಖಪ್ಪ ದೇವುರ, ಅಂಬಣ್ಣ ರೇವಶೆಟ್ಟಿ, ಚನ್ನಪ್ಪ ಕಂಬಾರ, ಲಕ್ಷ್ಮಣ ಹಿರೇಕುರಬರ, ಸಿದ್ದು ಹತ್ತಳ್ಳಿ ಇದ್ದರು. ಶ್ರೀ ವೀರಭದ್ರೇಶ್ವರ ಭಜನಾ ಕಲಾ ತಂಡದ ಕಲಾವಿದರನ್ನು ಸಿಂದಗಿ ಶಾಸಕ ಎಮ್.ಸಿ.ಮನಗೂಳಿ ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.