ADVERTISEMENT

ಸುರೇಶ ರಾಮಚಂದ್ರ ಜೋಶಿ ನಿಡೋಣಿಗೆ ಜಾನಪದ ಅಕಾಡೆಮಿ ಪ್ರಶಸ್ತಿ​

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 11:08 IST
Last Updated 4 ಜನವರಿ 2021, 11:08 IST
ಹಿರಿಯ ಜಾನಪದ ಕಲಾವಿದ ಸುರೇಶ ರಾಮಚಂದ್ರ ಜೋಶಿ ನಿಡೋಣಿ
ಹಿರಿಯ ಜಾನಪದ ಕಲಾವಿದ ಸುರೇಶ ರಾಮಚಂದ್ರ ಜೋಶಿ ನಿಡೋಣಿ   

ವಿಜಯಪುರ: ಕರ್ನಾಟಕ ಜಾನಪದ ಅಕಾಡೆಮಿ ಕೊಡಮಾಡುವ 2020ನೇ ಸಾಲಿನ ‘ಜಾನಪದ ಅಕಾಡೆಮಿ ಪ್ರಶಸ್ತಿ’ ಜಿಲ್ಲೆಯ ಹಿರಿಯ ಜಾನಪದ ಕಲಾವಿದ ಸುರೇಶ ರಾಮಚಂದ್ರ ಜೋಶಿ ನಿಡೋಣಿ ಅವರಿಗೆ ದೊರೆತಿದೆ.

ಬಬಲೇಶ್ವರ ತಾಲ್ಲೂಕಿನ ನಿಡೋಣಿ ಗ್ರಾಮದವರಾದ ಇವರು, 40 ವರ್ಷಗಳಿಂದ ಡೊಳ್ಳಿನ ಪದಗಳನ್ನು ಹಾಡುತ್ತಾ ಬಂದಿದ್ದಾರೆ. ಕರ್ನಾಟಕ ಮಾತ್ರವಲ್ಲದೇ, ನೆರೆಯ ಮಹಾರಾಷ್ಟ್ರ ರಾಜ್ಯದಲ್ಲೂ ‘ಡೊಳ್ಳಿನ ಪದಗಳ ಸರದಾರ’ ಎಂದು ಗುರುತಿಸಿಕೊಂಡಿದ್ದಾರೆ.

ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಡೊಳ್ಳಿನ ಪದಗಳನ್ನು ಹಾಡುವುದೇ ನನ್ನ ಜೀವನವಾಗಿಸಿಕೊಂಡಿರುವೆ. ನನ್ನ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿರುವ ಸರ್ಕಾರಕ್ಕೆ ಮತ್ತು ಅಕಾಡೆಮಿಗೆ ಅಬಾರಿಯಾಗಿದ್ದೇನೆ’ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.