
ಪ್ರಜಾವಾಣಿ ವಾರ್ತೆ
ವೀರೇಶ ಚೌಧರಿ
ಸಿಂದಗಿ: ತಾಲ್ಲೂಕಿನ ವಂದಾಲ ಗ್ರಾಮದ ಬಳಿ ಕಬ್ಬಿನ ಟ್ರ್ಯಾಕ್ಟರ್– ಬೈಕ್ ಮಧ್ಯೆ ಡಿಕ್ಕಿ ಉಂಟಾಗಿ ಬೈಕ್ ಸವಾರ ಶಿಕ್ಷಣ ಇಲಾಖೆಯ ಸಿಆರ್‌ಪಿ ವೀರೇಶ ಮಡಿವಾಳಪ್ಪ ಚೌಧರಿ (39) ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.
ಯಲಗೋಡದಲ್ಲಿ ನಡೆಯಬೇಕಿದ್ದ ಕಲಿಕಾ ಹಬ್ಬದ ಪೂರ್ವಸಿದ್ಧತಾ ಕಾರ್ಯ ಮುಗಿಸಿಕೊಂಡು ಸಿಂದಗಿ ಪಟ್ಟಣಕ್ಕೆ ಮರಳುವಾಗ ಅಪಘಾತವಾಗಿದೆ.
ಮೃತರ ಪತ್ನಿ ಈಶ್ವರಿ ನಾಗಠಾಣ ಅವರು ಸಿಂದಗಿ ತಾಲ್ಲೂಕು ಬಂದಾಳ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಬ್ಬರು ಪುತ್ರರು ಇದ್ದಾರೆ.
ಮೃತರ ಅಂತ್ಯಕ್ರಿಯೆ ಸಿಂದಗಿ ತಾಲ್ಲೂಕು ಹಂದಿಗನೂರ ಗ್ರಾಮದಲ್ಲಿ ಬುಧವಾರ ನಡೆಯಲಿದೆ ಎಂದು ತಿಳಿಸಲಾಗಿದೆ.
ಕಲಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಘಟನೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.