ADVERTISEMENT

ಸೋಲಾಪುರ | ಕಳುವಾದ 35 ದ್ವಿಚಕ್ರ ವಾಹನಗಳ ಜಪ್ತಿ: ಓರ್ವ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 4:09 IST
Last Updated 10 ನವೆಂಬರ್ 2025, 4:09 IST
<div class="paragraphs"><p>ಬಂಧನ</p></div>

ಬಂಧನ

   

ಸೋಲಾಪುರ: ಸೋಲಾಪುರ, ಪುಣೆ, ಪಿಂಪ್ರೀ-ಚಿಂಚವಡ್, ಸಾಂಗ್ಲಿ, ಮುಂಬೈ , ಥಾಣೆ ನಗರಗಳು ಸೇರಿದಂತೆ ಇತರ ಅಂತರ ಜಿಲ್ಲಾ ಪ್ರದೇಶಗಳಿಂದ ಕಳುವಾದ 35 ದ್ವಿಚಕ್ರ ವಾಹನಗಳೊಂದಿಗೆ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯನ್ನು ಜೈಲು ರೋಡ್ ಪೊಲೀಸ್ ಠಾಣೆಯ ಅಪರಾಧ ಶಾಖೆಯವರು ನಡೆಸಿದ್ದಾರೆ ಎಂದು ಪೊಲೀಸ್ ಆಯುಕ್ತ ಎಂ. ರಾಜಕುಮಾರ ಹೇಳಿದರು.

ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೈಲು ರೋಡ್ ಪೊಲೀಸ್ ಠಾಣೆಯ ಅಪರಾಧ ಶಾಖೆಯವರು ದ್ವಿಚಕ್ರ ವಾಹನ ಕಳ್ಳತನದ ಪ್ರಕರಣ ಭೇದಿಸಿದ್ದಾರೆ. ಅಕ್ಟೋಬರ್ 31ರಂದು ಜೈಲು ರೋಡ್ ಪೊಲೀಸ್ ಠಾಣೆಯ ಸಿಬ್ಬಂದಿ ಯುವರಾಜ ಗಾಯಕವಾಡ ಮತ್ತು ಉಮೇಶ ಸಾವಂತ ಅವರಿಗೆ ಸಿಕ್ಕ ಮಾಹಿತಿಯ ಆಧಾರದ ಮೇಲೆ ಅವರು ಸಿ.ಸಿಟಿವಿ ಕ್ಯಾಮೇರಾ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಅದರಲ್ಲಿ ಒಬ್ಬ ವ್ಯಕ್ತಿ ಕಳವು ಮಾಡಿದ ದ್ವಿಚಕ್ರ ವಾಹನ ಮಾರಾಟಕ್ಕಾಗಿ ಶನಿವಾರ ಪೇಠ ಗೆ ಬಂದಿರುವುದು ತಿಳಿದುಬಂದಿತು ಎಂದರು.

ADVERTISEMENT

ಅಪರಾಧ ಶಾಖೆಯ ಉಪನಿರೀಕ್ಷಕ ಸಂದೀಪ ಪಾಟೀಲ ಮತ್ತು ಅವರ ಸಿಬ್ಬಂದಿ ಅಲ್ಲಿ ಬಲೆ ಬೀಸಿ ಶಂಕಿತ ವ್ಯಕ್ತಿ  ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತ ವಿವಿಧ ಸ್ಥಳಗಳಿಂದ ಒಟ್ಟು 35 ದ್ವಿಚಕ್ರ ವಾಹನಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ಕಳ್ಳತನವಾದ MH 13 DL 5856 ಸಂಖ್ಯೆಯ ಬೈಕನ್ನೂ ಪತ್ತೆಹಚ್ಚಲಾಗಿದೆ. ಬಂಧಿತನನ್ನು ಶಂಕರ ಭಾರತ ದೇವಕುಳೆ (ವೈರಾಗ್ ರಸ್ತೆ, ಜಿ. ಧಾರಾಶಿವ). ಅವನಿಂದ ಒಟ್ಟು ₹10.98 ಲಕ್ಷ ಮೌಲ್ಯದ 35 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದರು.

ಹಿರಿಯ ಪೊಲೀಸ್ ನಿರೀಕ್ಷಕ ಶಿವಾಜಿ ರಾವತ, ಪೊಲೀಸ್ ನಿರೀಕ್ಷಕ ಭೌರಾವ ಬಿರಜದಾರ, ಉಪನಿರೀಕ್ಷಕರು ಸಂದೀಪ ಪಾಟೀಲ, ಎಂ.ಡಿ. ನದಾಫ, ಶರೀಫ ಶೇಖ, ಗಜಾನನ ಕನಗಿರಿ, ಧನಂಜಯ ಬಾಬರ, ಅಬ್ದುಲ್ ವಹಾಬ್ ಶೇಖ, ವಸಂತ ಮಾನೆ, ಭಾರತ ಗಾಯಕವಾಡ, ಉಮೇಶ ಸಾವಂತ, ಯುವರಾಜ ಗಾಯಕವಾಡ, ಸಂತೋಷ ವಾಯದಂಡೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.