ADVERTISEMENT

ಶ್ರೀಶೈಲ ಮಲ್ಲಿಕಾರ್ಜುನ ದೇವರ ಕಾರ್ತೀಕೋತ್ಸವ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2024, 14:50 IST
Last Updated 9 ಡಿಸೆಂಬರ್ 2024, 14:50 IST
ನಾಲತವಾಡದ ಸಿದ್ದಲಿಂಗಪ್ಪಗೌಡ ಕಸಬೇಗೌಡ್ರ  ಕಾಲೊನಿಯಲ್ಲಿರುವ ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ದೇವರ ಕಾರ್ತೀಕೋತ್ಸವದಲ್ಲಿ ಭಕ್ತರು ಸಂಭ್ರಮದಿಂದ ಪಾಲ್ಗೊಂಡಿದ್ದರು
ನಾಲತವಾಡದ ಸಿದ್ದಲಿಂಗಪ್ಪಗೌಡ ಕಸಬೇಗೌಡ್ರ  ಕಾಲೊನಿಯಲ್ಲಿರುವ ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ದೇವರ ಕಾರ್ತೀಕೋತ್ಸವದಲ್ಲಿ ಭಕ್ತರು ಸಂಭ್ರಮದಿಂದ ಪಾಲ್ಗೊಂಡಿದ್ದರು   

ನಾಲತವಾಡ:‌ ಪಟ್ಟಣದ ನಾರಾಯಣಪುರ ರಸ್ತೆಯಲ್ಲಿರುವ ಸಿದ್ದಲಿಂಗಪ್ಪಗೌಡ ಕಸಬೇಗೌಡ್ರ ಕಾಲೊನಿಯಲ್ಲಿರುವ ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ದೇವರ ಕಾರ್ತೀಕೋತ್ಸವ ಅಂಗವಾಗಿ ದೀಪೋತ್ಸವ ಶನಿವಾರ ಸಂಭ್ರಮದಿಂದ ಜರುಗಿತು.

ಬೆಳಿಗ್ಗೆಯಿಂದಲೇ ನಾಲತವಾಡದ ವಿವಿಧ ಓಣಿಗಳ ಶ್ರೀಶೈಲ ಮಲ್ಲಿಕಾರ್ಜುನ ಭಕ್ತರು ಸ್ವಾಮಿಗೆ ವಿಶೇಷ ಪೂಜೆ ಬಿಲ್ವಾರ್ಚನೆ, ರುದ್ರಾಭಿಷೇಕ ನಡೆಸಿದರು. ವೀಳ್ಯದೆಲೆ ಚೆಟ್ಟನ್ನು ಸಾಂಪ್ರದಾಯಿಕವಾಗಿ ಚಂದ್ರು ಕಸಬೇಗೌಡ್ರ ಕುಟುಂಬದ ಸಹಯೋಗದಲ್ಲಿ ತಂದು ಶ್ರೀಶೈಲ ಮಲ್ಲಿಕಾರ್ಜುನ ದೇವರಿಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸುತ್ತಿದ್ದಂತೆ ಭಕ್ತರು ದೇವಾಲಯದ ಆವರಣ, ದೇಗುಲದ ಶಿಖರದ ಮೇಲೆ ದೀಪ ಹಚ್ಚಿ ಜಯಘೋಷಗಳನ್ನು ಕೂಗಿ ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೆದ್ದರು.

ಸಿದ್ದಲಿಂಗಪ್ಪಗೌಡ ಕಸಬೇಗೌಡ್ರ, ಪವಾಡ ಬಸವರಾಜ ದೇಶಮುಖ, ಅಮರೇಶ ಕಸಬೇಗೌಡ್ರ, ಸಿದ್ದಲಿಂಗ ಅಂಗಡಿ, ಸಂಗಣ್ಣ ಕಾನೀಕೇರಿ, ಬಸವರಾಜ ತಾಳಿಕೋಟಿ, ಪರಸಪ್ಪ ನವಲಿ, ಅಮರಪ್ಪ ಗಂಗನಗೌಡ್ರ ,ಕಸಬೇಗೌಡ್ರ ಕಾಲೊನಿಯ ನೂರಾರು ಭಕ್ತರು ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.