ADVERTISEMENT

ಹೊಸ ಆವಿಷ್ಕಾರ, ಸ್ಟಾರ್ಟ್‌ಅಪ್‌ಗೆ ಮೈಲಿಗಲ್ಲು: ಎಂ.ಬಿ.ಪಾಟೀಲ

ಬಿ.ಎಂ.ಪಾಟೀಲ ಫೌಂಡೇಶನ್ ಫಾರ್ ಇನೊವೆಷನ್ ಆ್ಯಂಡ್ ಇನ್‌ಕ್ಯೂಬೇಶನ್ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 4:59 IST
Last Updated 28 ಜುಲೈ 2025, 4:59 IST
ವಿಜಯಪುರ  ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಕ್ಯಾಂಪಸ್‌ನಲ್ಲಿ ಬಿ.ಎಂ.ಪಾಟೀಲ ಫೌಂಡೇಶನ್ ಫಾರ್ ಇನೊವೆಷನ್ ಆ್ಯಂಡ್ ಇನ್‌ಕ್ಯೂಬೇಶನ್ ಅನ್ನು ಬೇಲಿಮಠ ಮಹಾಸಂಸ್ಥಾನದ  ಶಿವರುದ್ರ ಸ್ವಾಮೀಜಿ ಭಾನುವಾರ ಉದ್ಘಾಟಿಸಿದ ಬಳಿಕ ಸಚಿವ ಎಂ.ಬಿ.ಪಾಟೀಲರೊಂದಿಗೆ ಸಮಾಲೋಚಿಸಿದರು –ಪ್ರಜಾವಾಣಿ ಚಿತ್ರ 
ವಿಜಯಪುರ  ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಕ್ಯಾಂಪಸ್‌ನಲ್ಲಿ ಬಿ.ಎಂ.ಪಾಟೀಲ ಫೌಂಡೇಶನ್ ಫಾರ್ ಇನೊವೆಷನ್ ಆ್ಯಂಡ್ ಇನ್‌ಕ್ಯೂಬೇಶನ್ ಅನ್ನು ಬೇಲಿಮಠ ಮಹಾಸಂಸ್ಥಾನದ  ಶಿವರುದ್ರ ಸ್ವಾಮೀಜಿ ಭಾನುವಾರ ಉದ್ಘಾಟಿಸಿದ ಬಳಿಕ ಸಚಿವ ಎಂ.ಬಿ.ಪಾಟೀಲರೊಂದಿಗೆ ಸಮಾಲೋಚಿಸಿದರು –ಪ್ರಜಾವಾಣಿ ಚಿತ್ರ    

ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಕ್ಯಾಂಪಸ್‌ನಲ್ಲಿ ಬಿ.ಎಂ.ಪಾಟೀಲ ಫೌಂಡೇಶನ್ ಫಾರ್ ಇನೊವೆಷನ್ ಆ್ಯಂಡ್ ಇನ್‌ಕ್ಯೂಬೇಶನ್ ಅನ್ನು ಬೆಂಗಳೂರು ಬೇಲಿಮಠ ಮಹಾಸಂಸ್ಥಾನದ  ಶಿವರುದ್ರ ಸ್ವಾಮೀಜಿ ಭಾನುವಾರ ಉದ್ಘಾಟಿಸಿದರು.

ಸಂಸ್ಥೆಯ ಅಧ್ಯಕ್ಷರಾದ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ಇದು ಹೊಸ ಆವಿಷ್ಕಾರ ಮತ್ತು ಸ್ಟಾರ್ಟ್‌ಅಪ್ ಎಕೋಸಿಸ್ಟಮ್‌ಗೆ ಮೊದಲ ಮೈಲಿಗಲ್ಲು ಆಗಿದೆ ಎಂದು ಹೇಳಿದರು.

ಈ ಕೇಂದ್ರವು ನಾವೀನ್ಯತೆ, ಉದ್ಯಮಶೀಲತೆ ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ನೂತನ ವೇದಿಕೆಯಾಗಲಿದೆ. ನೂರಾರು ಹೊಸ ಯೂವ ಉದ್ಯಮಿಗಳ ಕನಸುಗಳನ್ನು ಸಾಕಾರಗೊಳಿಸಲು ಪೂರಕವಾಗಲಿದೆ ಎಂದರು.

ADVERTISEMENT

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ಫೌಂಡೇಶನ್ ನಿರ್ದೇಶಕ ಸುನೀಲಗೌಡ ಪಾಟೀಲ ಮಾತನಾಡಿ, ಈ ಕೇಂದ್ರವು ಮುಂದಿನ ದಿನಗಳಲ್ಲಿ ವಿಜ್ಞಾನ, ಆರೋಗ್ಯ, ಕೃಷಿ, ತಂತ್ರಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲಿ ಹೊಸ ಕಂಪನಿಗಳ ಪ್ರಾರಂಭಕ್ಕೆ ಮತ್ತು ನಾವೀನ್ಯತೆಯ ತಂತ್ರಜ್ಞಾನ ಆಧಾರಿತ ಪ್ಲಾಟ್‌ಫಾರ್ಮ್ ಆಗಿ ಬೆಳೆಯಲಿದೆ ಎಂದು ವಿಶ್ವಾಸ ವ್ಯಕ್ಯಪಡಿಸಿದರು.

ತಮಿಳುನಾಡಿನ ನಾಗಸಂದ್ರ ಜಂಗಮ ಮಠದ ಸಿದ್ದಲಿಂಗ ಸ್ವಾಮೀಜಿ, ಡೀಮ್ಡ್ ವಿವಿ ಕುಲಾಧಿಪತಿ ಬಸನಗೌಡ ಎಂ. ಪಾಟೀಲ, ಸಮಕುಲಾಧಿಪತಿ ವೈ. ಎಂ. ಜಯರಾಮ, ಕುಲಪತಿ ಡಾ. ಅರುಣ ಇನಾಮದಾರ, ರಿಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ, ಪ್ರಾಚಾರ್ಯ ಡಾ.ಅರವಿಂದ ಪಾಟೀಲ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ,  ಹಾಂತೇಶ ಬಿರಾದಾರ, ಫೌಂಡೇಶನ್‌ನ ಆಶೀಶ್‌ ಕುಲಕರ್ಣಿ ಇದ್ದರು.

ಹೈಟೆಕ್ ಆಯುರ್ವೇದ ಆಸ್ಪತ್ರೆ ಉದ್ಘಾಟನೆ

ವಿಜಯಪುರ: ಬಿ.ಎಲ್.ಡಿ.ಇ.ಸಂಸ್ಥೆಯ ಎ.ವಿ.ಎಸ್.ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಆವರಣದಲ್ಲಿ‌ ಹೈಟೆಕ್ ಆಯುರ್ವೇದ ಆಸ್ಪತ್ರೆ ಮತ್ತು ಶೈಕ್ಷಣಿಕ ಭವನವನ್ನು ಬೆಂಗಳೂರು ಬೇಲಿಮಠದ ಶಿವರುದ್ರ ಸ್ವಾಮೀಜಿ ಭಾನುವಾರ ಉದ್ಘಾಟಿಸಿದರು.

ಬಿ.ಎಲ್.ಡಿ.ಇ. ಆಸ್ಪತ್ರೆಯ ನಗರ ಆರೋಗ್ಯ ಕೇಂದ್ರ ನೂತನ ವಿಸ್ತರಣೆ ಘಟಕ ಆರಂಭಿಸಿ ವಿಜಯಪುರ ನಗರದ ದಕ್ಷಿಣ ಭಾಗದ ಜನತೆಗೆ ಒಂದೇ ಸೂರಿನಡಿ ಆಯುರ್ವೇದ ಹಾಗೂ ಅಲೋಪಥಿ ಸೇವೆಗಳು ಇಲ್ಲಿ ಲಭ್ಯವಿದ್ದು ಆಯುರ್ವೇದ ಮತ್ತು‌ ಅಲೋಪಥಿ‌‌ ಎರಡೂ ಸೇವೆಗಳು ಒಂದೆ ಸೂರಿನಡಿ‌ ಸಿಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.