ADVERTISEMENT

ವಿಜಯಪುರ | ರಭಸದ ಗಾಳಿಗೆ ಹಾರಿದ ಪತ್ರಾಸ್‌: ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2025, 14:15 IST
Last Updated 22 ಏಪ್ರಿಲ್ 2025, 14:15 IST
<div class="paragraphs"><p>ಸುನೀತಾ ಕಾಂತೇಶ ಲಮಾಣಿ</p></div>

ಸುನೀತಾ ಕಾಂತೇಶ ಲಮಾಣಿ

   

ವಿಜಯಪುರ: ಬಸವನಬಾಗೇವಾಡಿ ತಾಲ್ಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಮಂಗಳವಾರ ಸಂಜೆ ರಭಸದ ಗಾಳಿ ಬೀಸಿದ ಪರಿಣಾಮ ಶೆಡ್‌ನ ಪತ್ರಾಸ್‌ (ತಗಡು) ಹಾರಿ ಬಂದು ಮಹಿಳೆಯ ಕುತ್ತಿಗೆಗೆ ಬಡಿದ ಪರಿಣಾಮ ಸಾವಿಗೀಡಾಗಿದ್ದಾರೆ.

ಮುದ್ದೇಬಿಹಾಳ ತಾಲ್ಲೂಕಿನ ಕೊಪ್ಪ ಎಲ್‌.ಟಿ ಗ್ರಾಮದಿಂದ ಈರುಳ್ಳಿ ಆರಿಸುವ ಕೆಲಸಕ್ಕೆಂದು ಬಂದಿದ್ದ ಸುನೀತಾ ಕಾಂತೇಶ ಲಮಾಣಿ (34) ಸಾವಿಗೀಡಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ADVERTISEMENT

ಘಟನಾ ಸ್ಥಳಕ್ಕೆ ಬಸವನಬಾಗೇವಾಡಿ ಪೊಲೀಸ್ ಠಾಣೆಯ ಸಿಪಿಐ ಗುರುಶಾಂತ ದಾಶ್ಯಾಳ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.