
ಲಾಡ್ಲೇ ಮಶಾಕ್ ದರ್ಗಾ
ತಾಳಿಕೋಟೆ: ಹಜರತ್ ಅಲ್ಲಾವುದ್ದಿನ್ ಅನ್ಸಾರಿ ಉರ್ಫ ಲಾಡ್ಲೇ ಮಶ್ಯಾಕ್ ದರ್ಗಾ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಡಿ.22 ರಂದು ದರ್ಗಾಕ್ಕೆ ಸುಣ್ಣ ಏರುವುದರೊಂದಿಗೆ ಚಾಲನೆ ದೊರೆಯಿತು.
ಡಿ.27ರವರೆಗೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಡಿ.23 ರಂದು ಮಂಗಳವಾರ ರಾತ್ರಿ 11.00 ಗಂಟೆಯಿಂದ ಮೂಕಿಹಾಳದ ಬುಡ್ಡಾಸಾಹೇಬ ಬಾಬುಪಟೇಲ ಬಿರಾದಾರ(ಕುದರಿ ಗೌಡ) ಅವರಿಂದ ಕುದುರೆ ಕುಣಿತದೊಂದಿಗೆ ಗಂಧ ಹೊರಟು ಬೆಳಿಗ್ಗೆ 5.00 ಗಂಟೆಗೆ ದರ್ಗಾಕ್ಕೆ ತಲುಪುವುದು. ರಾತ್ರಿ 9.30ಕ್ಕೆ ಕವ್ವಾಲಿ ಡಿ.24 ಮತ್ತು 25 ರಂದು ಪುರುಷರ ಮುಕ್ತ (ಓಪನ್)ಕಬಡ್ಡಿ ಪಂದ್ಯಾವಳಿಯು ವಿಜಯಪುರ ಜಿಲ್ಲಾ ಅಮೆಚೂರ ಅಸೋಶಿಯೇಶನ್ನ ಸಂಯುಕ್ತಾಶ್ರಯದಲ್ಲಿ ಜರುಗಲಿದ್ದು ಪ್ರೊ ಕಬಡ್ಡಿ ಬೆಂಗಳೂರು ಬುಲ್ಸ್ ತಂಡದ ಆಟಗಾರರಾದ ಗಣೇಶ ಬಿ ಹಣಮಂತಗೋಳ ಹಾಗೂ ಸತ್ಯಪ್ಪ ಮಟ್ಟಿಭಾಗವಹಿಸಲಿದ್ದಾರೆ.
ಕಬಡ್ಡಿ ಪಂದ್ಯಾವಳಿಯನ್ನು ಶಾಸಕ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರು ಉದ್ಘಾಟಿಸುವರು. ಪ್ರಥಮ ₹50,001, ದ್ವಿತೀಯ-₹30,001,ತೃತೀಯ-₹20,001, ಚತುರ್ಥ-₹10,001 ಬಹುಮಾನ ನೀಡಲಾಗುತ್ತಿದೆ.
ಡಿ.24 ರಂದು ಉರುಸು ಸಂಜೆ 6.00ಗಂಟೆಗೆ 32ನೆಯ ವರ್ಷದ ಮಾನವ ಏಕತಾ ಶಾಂತಿ ಸಮಾವೇಶ ರಾತ್ರಿ 9.30ಕ್ಕೆ ಕಲಾ ಸಿಂಚನ ಮೆಲೋಡಿ ಮುದ್ದೇಬಿಹಾಳ ಇವರಿಂದ ಆರ್ಕೆಸ್ಟ್ರಾ ಸಂಗೀತ ಹಾಗೂ ಹಾಸ್ಯ ರಸಮಂಜರಿ ಕಾರ್ಯಕ್ರಮ ಡಿ.26ರಂದು ಬೆಳಿಗ್ಗೆ 9.00ರಿಂದ ಮಧ್ಯಾಹ್ನ 3.00 ಗಂಟೆಯವರೆಗೆ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ:ವಿಜಯಪುರ ನಗರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ.ಪ್ರಭುಗೌಡ ಬಿ.ಎಲ್.(ಚಬನೂರ) ಹಾಗೂ ಇತರ ತಜ್ಞ ನೇತ್ರವೈದ್ಯರು ಭಾಗವಹಿಸುವರು. ಉಚಿತ ಹೃದಯರೋಗ ತಪಾಸಣೆ , ಉಚಿತ ರಕ್ತದಾನ ಶಿಬಿರ ನಡೆಯುವುದು
ರಾತ್ರಿ 9.30ಕ್ಕೆ ದುರ್ಗಾ ಪರಮೇಶ್ವರ ನಾಟ್ಯ ಸಂಘ ಬಂಡಿಗಣಿ ಇವರಿಂದ ‘ರೈತ ನಗಲಿಲ್ಲ, ಸರ್ಕಾರ ಉಳಿಯಲಿಲ್ಲಾ(ಅಣ್ಣನ ಕಣ್ಣೀರು)‘ ನಾಟಕ ಜರುಗುವುದು
ದನಗಳ ಜಾತ್ರೆ:ಡಿ.23ರಿಂದ ಡಿ.27ರವರೆಗೆ ದನಗಳ ಜಾತ್ರೆ ಜರುಗಲಿದ್ದು ಡಿ 27 ರಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಬಹುಮಾನ ವಿತರಣೆ ಜರುಗುವುದು.
ಐದು ದಿನಗಳ ಕಾಳ ನಿರಂತರವಾಗಿ ಅನ್ನ ಸಂತರ್ಪಣೆ ನಡೆಯಲಿದೆ. ಎಂದು ಜಾತ್ರಾ ಸಮಿತಿಯ ಅಧ್ಯಕ್ಷ ಕೆ.ಎಚ್.ಪಾಟೀಲ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.