ಸಿಂದಗಿ: ಪಟ್ಟಣದಲ್ಲೊಂದು ಸುಂದರ, ಸುಸಜ್ಜಿತ ಉದ್ಯಾನ ಮಾಡಬೇಕು ಎಂಬುದು ಮತಕ್ಷೇತ್ರದ ಶಾಸಕರಾಗಿದ್ದ ತೋಟಗಾರಿಕೆ ಸಚಿವರೂ ಆಗಿದ್ದ ದಿವಂಗತ ಎಂ.ಸಿ.ಮನಗೂಳಿ ಅವರ ಕನಸಾಗಿತ್ತು.
ಅಂತೆಯೇ, 2018ರ ಅವರ ಅವಧಿಯಲ್ಲಿ ಕೆರೆ ಕೆಳಗಿನ 12 ಎಕರೆ ಪ್ರದೇಶದಲ್ಲಿನ ಒತ್ತುವರಿ ಆಗದೇ ಉಳಿದ ಎರಡು ಎಕರೆ ಉದ್ಯಾನವಾಗಿ ನಿರ್ಮಾಣ ಮಾಡಬೇಕು ಎಂದು ತೋಟಗಾರಿಕೆ ಇಲಾಖೆಯಿಂದ ₹1 ಕೋಟಿ, ಜೊತೆಗೆ ಪ್ರವಾಸೋದ್ಯಮ ಇಲಾಖೆಯಿಂದ ಇನ್ನೂ ₹1 ಕೋಟಿ ಅನುದಾನ ಮಂಜೂರಾತಿ ಪಡೆದುಕೊಂಡು ಭೂಮಿಪೂಜೆಯೂ ಮಾಡಿದ್ದರು.
ಪ್ರವಾಸೋದ್ಯಮ ಇಲಾಖೆಯ ₹50 ಲಕ್ಷ ಬಿಡುಗಡೆಗೊಂಡಿದ್ದರೂ ಕಾಮಗಾರಿ ಆಗಾಗ್ಗೆ ಕುಂಟುತ್ತ ಸಾಗಿತ್ತು. ಕಂಪೌಂಡ್ ಗೋಡೆ ನಿರ್ಮಾಣ, ಒಂದು ಬದಿ ಗೇಟ್ ಮಾಡಿ ಮತ್ತೆ ಸ್ಥಗಿತಗೊಂಡಿತು. ಮತ್ತೆ ಅರ್ಧ ಫೆವರ್ಸ್ ಹಾಕಲಾಗಿತ್ತು. ಒಂದು ಪ್ಯಾರಾಗೋಲ ನಿರ್ಮಾಣ ಮಾಡಲಾಗಿತ್ತು ಅಷ್ಟು ಒಂದು ಹಂತದ ಕಾಮಗಾರಿ.
ಮತ್ತೆ ಹಲವು ವರ್ಷಗಳ ನಂತರ ಎರಡನೆಯ ಹಂತದಲ್ಲಿ ಶಾಸಕ ಅಶೋಕ ಮನಗೂಳಿಯವರು ಅನುದಾನ ಬಿಡುಗಡೆಗೊಳಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು. ಮತ್ತೆ ಈಗ ನನೆಗುದಿಗೆ ಬಿದ್ದಿದೆ. ಈ ಕುರಿತು ಶಾಸಕರು, ಸಾರ್ವಜನಿಕರು ಉದ್ಯಾನದ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಏನು ಮಾಡುವುದು ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
7-8 ತಿಂಗಳ ಹಿಂದೆ ಉದ್ಯಾನದ ಬಳಿ ಶೌಚಾಲಯ ಕಟ್ಟಲಾಗಿದ್ದರೂ ಬೀಗ ಮಾತ್ರ ತೆಗೆದಿಲ್ಲ. ಈ ಉದ್ಯಾನ ಲೋಕಾರ್ಪಣೆಗೊಳ್ಳುವುದು ಬಹುತೇಕ ಅಸಾಧ್ಯ. ಸರ್ಕಾರದ ಲಕ್ಷಾಂತರ ಹಣ ವ್ಯರ್ಥವಾಗುತ್ತದೆ. ಶಾಸಕರು ಈ ಕುರಿತು ಆಸಕ್ತಿ ವಹಿಸಿದರೆ ಸಾಧ್ಯವಾಗಬಹುದು ಎನ್ನಲಾಗುತ್ತಿದೆ.
ಮತ್ತೆ ₹25 ಲಕ್ಷ ಖರ್ಚು ಮಾಡಲಾಗಿದೆ. ಪೇವರ್ಸ್ ಹಾಕಿದೆ. ಗಿಡಗಳನ್ನು ನೆಡಲಾಗಿದೆ. ಆದರೆ ಸಾರ್ವಜನಿಕರು ಬಹಿರ್ದೆಸೆಗೆ ಬಳಸಿಕೊಳ್ಳುತ್ತಿರುವುದು ಅತ್ಯಂತ ವಿಷಾದಕರ. ಉದ್ಯಾನ ನಿರ್ವಹಣೆ ಇಲ್ಲದ ಕಾರಣ ಹೀಗಾಗುತ್ತಿದೆ. ಸಾರ್ವಜನಿಕರು ಪುರಸಭೆ ಸದಸ್ಯರು ಕಾಳಜಿ ವಹಿಸಬೇಕು.ಅಶೋಕ ಮನಗೂಳಿ ಶಾಸಕ
ಎಂ.ಸಿ.ಮನಗೂಳಿಯವರು ಕೆರೆಯ ಕೆಳಗೆ ಉದ್ಯಾನ ನಿರ್ಮಾಣ ಮಾಡಿ ಅದರಲ್ಲಿ ತೋಂಟದ ಸಿದ್ಧಲಿಂಗ ಶ್ರೀಗಳ ಪುತ್ಥಳಿ ಅನಾವಾರಣ ಮಾಡುವ ದಿಸೆಯಲ್ಲಿ ಕಾರ್ಯ ಪ್ರವೃತ್ತರಾಗಿದ್ದರು. ಆದರೆ ಅವರ ಕನಸು ಕನಸಾಗಿಯೇ ಉಳಿದುಕೊಂಡಿದೆ. ಶಾಸಕ ಅಶೋಕ ಮನಗೂಳಿ ತಂದೆಯ ಕನಸು ನನಸಾಗಿಸಬೇಕುಎಂ.ಎಂ.ಪಡಶೆಟ್ಟಿ ಸಾಹಿತಿ ಸಿಂದಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.