
ವಿಜಯಪುರ: ವಿಜಯಪುರ ನಗರ, ತಿಕೋಟಾ ತಾಲ್ಲೂಕು ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ಗುಡುಗು, ಸಿಡಿಲಿನೊಂದಿಗೆ ವರ್ಷದ ಪ್ರಥಮ ಮಳೆಯಾಗಿದೆ.
ಬೇಸಿಗೆ ಆರಂಭದಲ್ಲೇ ಬಿಸಿಲಿನಿಂದ ಬಸವಳಿದಿದ್ದ ಜಿಲ್ಲೆಗೆ ಮಳೆ ತಂಪು ನೀಡಿದೆ. ಎರಡು ದಿನಗಳಿಂದ ದಟ್ಟವಾದ ಮೋಡ ಕವಿದ ವಾತಾವರಣ ಇತ್ತು. ಇದೀಗ ಮಳೆಯಾಗಿರುವುದು ಖುಷಿಯ ಸಂಗತಿಯಾದರೂ ಅಕಾಲಿಕ ಮಳೆಯಿಂದ ಪ್ರಮುಖವಾಗಿ ಜಿಲ್ಲೆಯ ದ್ರಾಕ್ಷಿ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.
ಜಿಲ್ಲೆಯಾದ್ಯಂತ ಇದೀಗ ದ್ರಾಕ್ಷಿ ಬೆಳೆ ಕಟಾವಿಗೆ ಬಂದಿದ್ದು, ಒಣ ದ್ರಾಕ್ಷಿ ತಯಾರಿಕೆಗೆ ಬೆಳೆಗಾರರು ಸಜ್ಜಾಗಿರುವ ಹೊತ್ತಿನಲ್ಲಿ ಮಳೆಯಾಗಿರುವುದು ತೊಂದರೆಯಾಗಿದೆ. ದ್ರಾಕ್ಷಿ ಬೆಳೆಗಾರರು ನಷ್ಠ ಅನುಭವಿಸುವ ಭೀತಿ ಎದುರಾಗಿದೆ.
ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ನಿವರಗಿ ಗ್ರಾಮದ ಸುನೀಲ ಇಂಗಳೆ ರೈತರೊಬ್ಬರ ತೋಟದಲ್ಲಿ ಸೋಮವಾರ ಸಂಜೆ ಬೀಸಿದ ಬಿರುಗಾಳಿಗೆ ದ್ರಾಕ್ಷಿ ಸಾಲು ನೆಲಕ್ಕುರುಳಿರುವದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.