ADVERTISEMENT

ವಸತಿ ಯೋಜನೆ ಪೂರ್ಣಗೊಳಿಸಿ: ತಹಶೀಲ್ದಾರ್ ವಿನಯಾ ಹೂಗಾರ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 5:19 IST
Last Updated 21 ಸೆಪ್ಟೆಂಬರ್ 2025, 5:19 IST
   

ತಾಳಿಕೋಟೆ: ಪಟ್ಟಣದ ವಾರ್ಡ್ ಸಂಖ್ಯೆ 19ರಲ್ಲಿ ಇರುವ ಮಾದರ ಓಣಿಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ವಸತಿ ಯೋಜನೆಯ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮನೆಗಳ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಜಾಂಭವ ಯುವ ಸೇನಾ ತಾಲ್ಲೂಕು ಸಮಿತಿಯ ಪದಾಧಿಕಾರಿಗಳು ಅಧ್ಯಕ್ಷ ಕಾಶಿನಾಥ ಮಾದರ ನೇತೃತ್ವದಲ್ಲಿ ತಹಶೀಲ್ದಾರ್ ವಿನಯಾ ಹೂಗಾರ ಇವರಿಗೆ ಶನಿವಾರ ಮನವಿ ಸಲ್ಲಿಸಿದರು.

ಮೂರು ವರ್ಷಗಳ ಹಿಂದೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ವಸತಿ ಯೋಜನೆ ಅಡಿಯಲ್ಲಿ ವಾರ್ಡ್ ಸಂಖ್ಯೆ 19ರ ಮಾದರ ಓಣಿಯ ಸ್ಲಂ ನಿವಾಸಿಗಳಿಗೆ 10 ಮನೆಗಳು ಮಂಜೂರಾಗಿದ್ದು, ಇದರ ಫಲಾನುಭವಿಗಳು ವಂತಿಗೆ ತುಂಬಿದ್ದಾರೆ. ಮನೆಗಳ ಕಾಮಗಾರಿ ಆಮೆ ವೇಗದಲ್ಲಿ ನಡೆದಿದೆ. ಪತ್ರಾಸಿನ ಮನೆಗಳನ್ನು ತೊರೆದು ರಸ್ತೆಗೆ ಬಿದ್ದಿರುವ ಇಲ್ಲಿಯ ನಿವಾಸಿಗಳು ಸೂರು ಇಲ್ಲದೇ ಬಾಡಿಗೆ ಮನೆಯಲ್ಲಿ ಇರುವುದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಜಾಂಭವ ಯುವ ಸೇನಾ ಸಮಿತಿಯ ಪದಾಧಿಕಾರಿಗಳಾದ ಕೆ.ಡಿ.ಮಾದರ, ಗಿರೀಶ ಕಟ್ಟಿಮನಿ, ಕಾಶಿನಾಥ್ ಕಟ್ಟಿಮನಿ, ಮಲ್ಲಪ್ಪ ಶಿರೋಳ, ರಾಘವೇಂದ್ರ ಬಾನೇಲ, ತಾಯಪ್ಪ ಮಾದರ, ನಾಗಪ್ಪ ಕಟ್ಟಿಮನಿ ಮತ್ತಿತರರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.