
ವಿಜಯಪುರ: ನಗರದ ಹೊರವಲಯದ ಇಟ್ಟಂಗಿಹಾಳದಲ್ಲಿರುವ ವೇದ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ (ವಿಪ್ಸ್) ನೂತನ ಕಟ್ಟಡ ಲೋಕಾರ್ಪಣೆ ಜ.26ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ.
ಕೇಂದ್ರೀಯ ಪಠ್ಯಕ್ರಮದ ಅವಶ್ಯಕತೆ ಅರಿತು ಬರುವ ಶೈಕ್ಷಣಿಕ ವರ್ಷದಿಂದಲೇ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆ (ಸಿಬಿಎಸ್‌ಸಿ) ಕಾರ್ಯಾರಂಭ ಮಾಡಲಿದೆ. ಈ ಶಾಲೆಯಲ್ಲಿ ಪ್ರಾರಂಭದಿಂದಲೇ ಎನ್ಇಇಟಿ ಮತ್ತು ಜೆಇಇ ಪರೀಕ್ಷೆಗಳ ತಯಾರಿಗೆ ಆದ್ಯತೆ ನೀಡಲಾಗುವುದು.
ವಿಪ್ಸ್ ವಿಶೇಷತೆ: ವಿಶಾಲವಾದ ಕಟ್ಟಡ, ನಗರದ ಜನಸಂದಣಿಯಿಂದ ಮುಕ್ತವಾದ ನೈಸರ್ಗಿಕ ವಾತಾವರಣ, ಕಾಂಪೋಜಿಟ್ ಲ್ಯಾಬ್, ಡಿಜಿಟಲ್ ವರ್ಗ ಕೋಣೆಗಳು, ಸುಸಜ್ಜಿತ ಕಂಪ್ಯೂಟರ್ ಮತ್ತು ಭಾಷಾ ಲ್ಯಾಬ್, ಗ್ರಂಥಾಲಯ, ವಿಶಾಲವಾದ ವಿಶೇಷ ಆಟದ ಮೈದಾನ, ಸುಸಜ್ಜಿತ ಸಾರಿಗೆ ವ್ಯವಸ್ಥೆ, ಡೇ ಬೋರ್ಡಿಂಗ್ ವ್ಯವಸ್ಥೆ ಸೇರಿದಂತೆ ಅಂತರರಾಷ್ಟ್ರೀಯ ಮಾನದಂಡದ ಅನುಗುಣವಾಗಿ ಎಲ್ಲಾ ಸೌಕರ್ಯಗಳನ್ನು ಸನ್ನದ್ಧಗೊಳಿಸಲಾಗಿದೆ.
ಕಳೆದ 30 ವರ್ಷಗಳಿಂದ ಮಕ್ಕಳ ಶಿಕ್ಷಣಕ್ಕಾಗಿ, ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರ ತರುವುದರಲ್ಲಿ, ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ಅಣಿಗೊಳಿಸುವಲ್ಲಿ ಡಾ.ಶಿವಾನಂದ ಕೆಲೂರ ಅವರು ಈ ಪ್ರಯತ್ನಕ್ಕೆ ಮುಂದಾಗಿದ್ದಾರೆ.