ADVERTISEMENT

ಹೊರ್ತಿ | ದಸರಾ ಉತ್ಸವ: ಆದಿಶಕ್ತಿ ಮೂರ್ತಿಯ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 15:28 IST
Last Updated 3 ಅಕ್ಟೋಬರ್ 2024, 15:28 IST
ಹೊರ್ತಿ ಸಮೀಪದ ಕನ್ನೂರು ಗ್ರಾಮದಲ್ಲಿ ನವರಾತ್ರಿ ಉತ್ಸವ-2024 ಅಂಗವಾಗಿ ಶ್ರೀ ಬಸವೇಶ್ವರ ಆದಿಶಕ್ತಿ ತರುಣ ಸೇವಾ ಮಂಡಳಿ ಮತ್ತು ಶ್ರೀ ಲಕ್ಷ್ಮೀ ದೇವಸ್ಥಾನಗಳ ಸೇವಾ ಸಮಿತಿ ವತಿಯಿಂದ ಆದಿಶಕ್ತಿ ಮೂರ್ತಿ ಭವ್ಯ ಮೆರವಣಿಗೆ ನಡೆಯಿತು
ಹೊರ್ತಿ ಸಮೀಪದ ಕನ್ನೂರು ಗ್ರಾಮದಲ್ಲಿ ನವರಾತ್ರಿ ಉತ್ಸವ-2024 ಅಂಗವಾಗಿ ಶ್ರೀ ಬಸವೇಶ್ವರ ಆದಿಶಕ್ತಿ ತರುಣ ಸೇವಾ ಮಂಡಳಿ ಮತ್ತು ಶ್ರೀ ಲಕ್ಷ್ಮೀ ದೇವಸ್ಥಾನಗಳ ಸೇವಾ ಸಮಿತಿ ವತಿಯಿಂದ ಆದಿಶಕ್ತಿ ಮೂರ್ತಿ ಭವ್ಯ ಮೆರವಣಿಗೆ ನಡೆಯಿತು   

ಹೊರ್ತಿ: ಸಮೀಪದ ಕನ್ನೂರ ಗ್ರಾಮದಲ್ಲಿ ಆದಿಶಕ್ತಿ ಮತ್ತು ಲಕ್ಷ್ಮೀ ದೇವಸ್ಥಾನಗಳ ಸೇವಾ ಸಮಿತಿಯಿಂದ 71ನೇ ವರ್ಷದ ನವರಾತ್ರಿ ಉತ್ಸವ-2024 ನಡೆಯಿತು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆದಿಶಕ್ತಿ ಮೂರ್ತಿ ಭವ್ಯ ಮೆರವಣಿಗೆಯ ನಡೆಯಿತು ಆಲಮೇಲದ ದತ್ತಾ ಡೊಳ್ಳಿನ ಸಂಘ, ಆಲಗೂರ ಆದಿನಾಥ ಬ್ರಾಸ್ ಬ್ಯಾಂಡ್ ಮ್ಯೂಜಿಕಲ್ ಕಂಪನಿ, ಕನ್ನೂರು ಗ್ರಾಮದ ಶಿವಲಿಂಗೇಶ್ವರ ಹಲಗೆಮೇಳ, ಬಜಂತ್ರಿಯವರ ಕಲಾ ಬಳಗ ಮತ್ತು ಕಲಾ ವಾದ್ಯ ಮೇಳಗಳೊಂದಿಗೆ ಆದ್ಧೂರಿಯ ಮೆರವಣಿಗೆ ನಡೆಯಿತು.

ಸಂಜೆ 6 ಘಂಟೆಗೆ ಸಕಲ ಪೂಜಾ ವಿಧಿ-ವಿಧಾನಗಳು ಜರುಗಿದವು. ಕನ್ನೂರು ಗುರುಮಠದ ಸೋಮನಾಥ ಶಿವಾಚಾರ್ಯರು ಸಮ್ಮುಖದಲ್ಲಿ ಮೂರ್ತಿ ಪ್ರತಿಷ್ಠಾಪಿಸಲಾಯಿತು.

ADVERTISEMENT

ಭವಾನಿ ಜುವೇಲರ್ಸ್‌ ಅರ್ಜುನ ಕದಂ ಅವರಿಂದ ಆದಿಶಕ್ತಿ ಮತ್ತು ಲಕ್ಷ್ಮೀ ದೇವಸ್ಥಾನಗಳ ದೀಪಾಲಂಕಾರ ಸೇವೆ ಛಾಯಾಚಿತ್ರಗಾರ ಸಚಿನ ಬಂಡಿ ಮತ್ತು ಗುತ್ತಿಗೆದಾರ ಸಚೀನ್ ಮ.ಪೂಜಾರಿ ಒದಗಿಸಲಿದ್ದಾರೆ. ಮಂಟಪ ಸೇವೆ ಅಲ್ಲಾಭಕ್ಷ (ಬುಡ್ಡೇಸಾ) ಕರೋಶಿ ಒದಗಿಸಿದ್ದಾರೆ.

ನವರಾತ್ರಿ ಅಂಗವಾಗಿ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಮಹಾ ಮಂಗಳಾರುತಿ ಮತ್ತು ಉಡಿತುಂಬುವ ಕಾರ್ಯಕ್ರಮ ನಡೆಯಲಿವೆ. ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆಯನ್ನು ದಾನಿಗಳು ಮಾಡಿದ್ದಾರೆ.

ಅ.6ರಂದು ರಾತ್ರಿ 9ಕ್ಕೆ ಇಂಗಳೇಶ್ವರದ ರೇಣುಕಾ ಯಲ್ಲಮ್ಮ ಚೌಡಕಿ ಸಂಘದವರಿಂದ 'ಚೌಡಕಿ ಪದಗಳು' ಮಾತಂಗಿ ಮಹಿಳಾ ಸಂಘದವರು ನಡೆಸಿಕೊಡಲಿದ್ದಾರೆ. ಅ.8ರಂದು ರಾತ್ರಿ 10ಕ್ಕೆ ಇಂಡಿ ಪಟ್ಟಣದ ಸಾಗರ ಮಾನೆ ಇವರಿಂದ 'ಗೊಂದಲ ಕಾರ್ಯಕ್ರಮ' ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.