ADVERTISEMENT

ವಿಜಯಪುರ: ₹8.5 ಲಕ್ಷ ಮೌಲ್ಯದ ನಕಲಿ ಮದ್ಯ ವಶ; ಆರು ಜನರ ಬಂಧನ

ನಕಲಿ ಮದ್ಯ ತಯಾರಿಕಾ ಘಟಕದ ಮೇಲೆ ಅಬಕಾರಿ ದಾಳಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2024, 16:07 IST
Last Updated 14 ಡಿಸೆಂಬರ್ 2024, 16:07 IST
ಸಿಂದಗಿ ಪಟ್ಟಣದ ಮೊರಟಗಿ ರಸ್ತೆಯ ಜಮೀನಿನ ಶೆಡ್‌ವೊಂದರಲ್ಲಿ ಅಕ್ರಮವಾಗಿ ಮದ್ಯ ತಯಾರಿಸುತ್ತಿದ್ದ ಘಟಕದ ಮೇಲೆ ದಾಳಿ ವಶಪಡಿಸಿಕೊಂಡಿರುವ ನಕಲಿ ಮದ್ಯ ಹಾಗೂ ಆರೋಪಿಗಳೊಂದಿಗೆ ಅಬಕಾರಿ ಸಿಬ್ಬಂದಿ
ಸಿಂದಗಿ ಪಟ್ಟಣದ ಮೊರಟಗಿ ರಸ್ತೆಯ ಜಮೀನಿನ ಶೆಡ್‌ವೊಂದರಲ್ಲಿ ಅಕ್ರಮವಾಗಿ ಮದ್ಯ ತಯಾರಿಸುತ್ತಿದ್ದ ಘಟಕದ ಮೇಲೆ ದಾಳಿ ವಶಪಡಿಸಿಕೊಂಡಿರುವ ನಕಲಿ ಮದ್ಯ ಹಾಗೂ ಆರೋಪಿಗಳೊಂದಿಗೆ ಅಬಕಾರಿ ಸಿಬ್ಬಂದಿ   

ವಿಜಯಪುರ: ಸಿಂದಗಿ ಪಟ್ಟಣದ ಮೊರಟಗಿ ರಸ್ತೆಯಲ್ಲಿರುವ ಲೋಯೋಲ ಆಂಗ್ಲ ಮಾಧ್ಯಮ ಶಾಲೆ ಹಿಂಬದಿಯಲ್ಲಿರುವ ಜಮೀನಿನ ಶೆಡ್‌ವೊಂದರಲ್ಲಿ ಅಕ್ರಮವಾಗಿ ಮದ್ಯ ತಯಾರಿಸುತ್ತಿದ್ದ ಘಟಕದ ಮೇಲೆ ಶನಿವಾರ ಅಬಕಾರಿ ಸಿಬ್ಬಂದಿ ದಾಳಿ ನಡೆಸಿ, ₹8.5 ಲಕ್ಷ ಮೌಲ್ಯದ ನಕಲಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ಅಮೋಘಸಿದ್ಧ ಹೂಗಾರ ಎಂಬುವವರ ಜಮೀನಿನಲ್ಲಿರುವ ಶೆಡ್ಡಿನ ಮೇಲೆ ಅಬಕಾರಿ ಸಿಬ್ಬಂದಿ ದಾಳಿ ಮಾಡಿ 561 ಲೀಟರ್‌ ನಕಲಿ ಮದ್ಯ ಮತ್ತು 140 ಲೀಟರ್ ಮದ್ಯಸಾರ ಹಾಗೂ ನಕಲಿ ಮದ್ಯ ತಯಾರಿಸುವ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.

‍ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂದಗಿಯ ಅಮೋಘಸಿದ್ಧ ಹೂಗಾರ ಹಾಗೂ ಹುಬ್ಬಳ್ಳಿಯ ಕೃಷ್ಣಾ ಬಾಂಡಗೆ, ಅಕ್ಷಯ ಜಾಧವ್, ಅಭಿಷೇಕ್ ಜಾಧವ್, ನಾಗರಾಜ ಭೋಜಗೇರಿ, ವಿನಾಯಕ ಕಲಾಲ ಎಂಬ ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿರುವುದಾಗಿ ಸಿಂದಗಿ ಅಬಕಾರಿ ನಿರೀಕ್ಷಕ ಶಿವಾನಂದ ಹೂಗಾರ ಪ್ರಕರಣ ತಿಳಿಸಿದ್ದಾರೆ.

ADVERTISEMENT

ಅಬಕಾರಿ ಉಪ ಆಯುಕ್ತ ವೀರಣ್ಣ ಭಾಗೇವಾಡಿ, ಅಬಕಾರಿ ನಿರೀಕ್ಷಕರಾದ ಮಹಾದೇವ ಪೂಜಾರಿ, ರಾಹುಲ್‌ ನಾಯಕ, ಎಂ.ಡಿ ಕಬಾಡೆ, ಉಪ ನಿರೀಕ್ಷಕ ನಾಗಠಾಣ, ರಜಪೂತ, ಪತ್ತಾರ, ಬಾರಾಗಣಿ, ಆಶ್ರಿತ್‌, ಫರೀನಾ ಹಾಗೂ ಸಿಬ್ಬಂದಿಗಳಾದ ಮೊಕಾಶಿ,  ಪೂಜಾರಿ, ಬೈರಗೊಂಡ, ಇಂಡಿ ನಾಗಪ್ಪ, ಭೀಮಾಶಂಕರ, ಮಲ್ಲಪ್ಪ, ಗೊಣಸಗಿ, ಶ್ರೀಶೈಲ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.