
ಪ್ರಜಾವಾಣಿ ವಾರ್ತೆ
ಸಿಂದಗಿ: ತಾಲ್ಲೂಕಿನ ಗಬಸಾವಳಗಿ ಗ್ರಾಮದಲ್ಲಿ ಎನ್ಆರ್‌ಎಲ್ಎಂ ಯೋಜನೆಯಡಿ ಸ್ವಸಹಾಯ ಸಂಘ ಮಹಿಳಾ ಒಕ್ಕೂಟದಿಂದ ಮಾಸಿಕ ಸಂತೆ ಮೇಳ ಜರುಗಿತು.
ಮೇಳದಲ್ಲಿ ವಸ್ತು ಪ್ರದರ್ಶನ, ಸ್ವಸಹಾಯ ಸಂಘಗಳಿಂದ ಸಿದ್ಧಪಡಿಸಿದ ತಿಂಡಿ– ತಿನುಸುಗಳು, ಕರಕುಶಲ ಗೃಹೋಪಯೋಗಿ ವಸ್ತುಗಳ ಮಾರಾಟ ನಡೆಯಿತು.
ಮೇಳದಲ್ಲಿ ತಾಲ್ಲೂಕು ವಲಯ ಮೇಲ್ವಿಚಾರಕ ಸಿದ್ದು ಜಂಬಗಿ, ಒಕ್ಕೂಟದ ನಿರ್ಮಲಾ ಕೋಳಕೂರ, ತಾಲ್ಲೂಕು ಬಿಆರ್‌ಪಿ-ಇಪಿ ಮುಮತಾಜ ಮುಲ್ಲಾ, ಒಕ್ಕೂಟದ ಅಧ್ಯಕ್ಷೆ ದೇವಮ್ಮ ಬಿರಾದಾರ, ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ಆಲಮೇಲ ಹಾಗೂ ಕೃಷಿ ಸಖಿಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.