
ವಿಜಯಪುರ: ತಿಕೋಟಾ ತಾಲ್ಲೂಕಿನ ಹುಬನೂರ ಗ್ರಾಮದಲ್ಲಿ ಆರಂಭಿಸಿರುವ ಎಂಎಸ್ಐಎಲ್ ಮದ್ಯದ ಅಂಗಡಿಯನ್ನು ಮುಚ್ಚಲು ಒತ್ತಾಯಿಸಿ ಹುಬನೂರ ಗ್ರಾಮ ಹಾಗೂ ತಾಂಡಾಗಳ ಮಹಿಳೆಯರು ಹೆಚ್ಚುವರಿ ಜಿಲ್ಲಾಧಿಕಾರಿ ಸೋಮನಿಂಗ್ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮದ ಮುಖಂಡ ಲಕ್ಷ್ಮಣ ಮಲ್ಲಪ್ಪ ಮಾಳಿ ಮಾತನಾಡಿ, ಎಂಎಸ್ಐಎಲ್ ಮಳಿಗೆ ಗ್ರಾಮದಲ್ಲಿ ಆರಂಭವಾದಾಗಿನಿಂದ ಗ್ರಾಮದ ಪುರುಷರು ಹೆಚ್ಚಿನ ಪ್ರಮಾಣದಲ್ಲಿ ಮದ್ಯಪಾನದ ಚಟಕ್ಕೆ ದಾಸರಾಗಿದ್ದು ಅವರ ಕುಟುಂಬದ ನೆಮ್ಮದಿ ಹಾಳಾದಂತಾಗಿದೆ. ಅಲ್ಲದೇ ಗ್ರಾಮದ ಯುವಕರು ಸಹ ಮದ್ಯಪಾನದ ಚಟಕ್ಕೆ ಬಲಿಯಾಗುತ್ತಿದ್ದಾರೆ ಎಂದರು.
ಸಮಾಜ ಸೇವಕ ಎನ್.ಸುರೇಶ ಮಾತನಾಡಿ, ಗ್ರಾಮದಲ್ಲಿಯೇ ಮದ್ಯದಂಗಡಿ ಇರುವುದರಿಂದ ಕುಡುಕರ ಹಾವಳಿ ಮೀತಿಮೀರಿದೆ. ಇದರಿಂದಾಗಿ ಮಹಿಳೆಯರು, ಸಾಮನ್ಯ ಜನರು, ಮಕ್ಕಳು ತಿರುಗಾಡಲು ಭಯಪಡುವ ಪರಿಸ್ಥಿತಿ ಬಂದೊದಗಿದೆ. ಗ್ರಾಮದ ಪಕ್ಕದಲ್ಲಿರುವ ಅರಣ್ಯ ಪ್ರದೇಶ ಸಂಪೂರ್ಣ ಕುಡುಕರ ತಾಣವಾಗಿದೆ ಎಂದರು.
ಮೈಬೂಬ ನದಾಫ್, ಪ್ರಕಾಶ ಮಾಳಿ, ರಾಮಣ್ಣ ಮಾಳಿ, ಲಕ್ಕಪ್ಪ ಮಾಳಿ, ರಾಜು ಸಾವಂತ್, ಪಿಂಟು ಸಾಳುಂಕೆ, ಬಸವರಾಜ್ ಪಾರೆ, ಗೈಬು ಸಾಬ್ ಸನದಿ, ಲಾಲಸಾಬ್ ಸನದಿ, ಸುಕನ್ಯಾ ರಾಮಣ್ಣ ಮಾಳಿ, ಆಫೀಜಾ ನದಾಫ್, ಇಂದ್ರಾಬಾಯಿ ಬಿರಾದಾರ್, ಚವಳಾಬಾಯಿ ಲಮಾಣಿ, ಬೋರಮ್ಮ ಮಾಲಗಾವಿ, ಪದ್ಮವ್ವ ಮಾಲಗಾವಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.