ಕೊಲ್ಹಾರ: ಪಟ್ಟಣ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಾಲ್ವರು ಸಿಬ್ಬಂದಿ ಉತಾರ ವಿತರಣೆಯಲ್ಲಿ ಅಕ್ರಮ ನಡೆಸುತ್ತಿದ್ದು, ಅವರನ್ನು ಬೇರೆಡೆ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ಪಟ್ಟಣ ಪಂಚಾಯ್ತಿ ಸದಸ್ಯ ಸಿದ್ದು ಗುಣಕಿ ನೇತೃತ್ವದಲ್ಲಿ ಮುಖಂಡರು ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಪಟ್ಟಣ ಪಂಚಾಯಿತಿಯ ಸಿಬ್ಬಂದಿ ಆದ ಮಲ್ಲಪ್ಪ ಬ್ಯಾಲ್ಯಾಳ, ಗೌಡಪ್ಪ ಕಾರಜೋಳ, ಸಿದ್ದಪ್ಪ ಮುರನಾಳ ಹಾಗೂ ಶ್ರೀಶೈಲ ಬ್ಯಾಲ್ಯಾಳ ಉತಾರ ನೀಡುವಲ್ಲಿ ಅಕ್ರಮ ಎಸಗುತ್ತಿದ್ದಾರೆ. ತಮ್ಮ ಸಂಬಂಧಿಕರು ಹಾಗೂ ಬೇಕಾದವರಿಗೆ ಮಾತ್ರ ಉತಾರ ನೀಡುತ್ತಿದ್ದಾರೆ. ಬಡವರ ನಿವೇಶನಗಳಿಗೆ ತಾವೇ ತಕರಾರು ಅರ್ಜಿಗಳನ್ನಿಟ್ಟು ನಂತರ ಹಣ ಪಡೆದು ತಕರಾರು ಹಿಂಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಈ ವೇಳೆ ಮುಖಂಡರಾದ ಎಂ.ಆರ್.ಕಲಾದಗಿ, ಸುಭಾಷ್ ಭಜಂತ್ರಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.