ADVERTISEMENT

ನಿಜಗುಣಾನಂದ ಶ್ರೀ, ಸಾಣೆಹಳ್ಳಿ ಶ್ರೀಗಳಿಂದ ದೇವರಿಗೆ ಅಪಮಾನ: ಯತ್ನಾಳ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 4:28 IST
Last Updated 27 ಅಕ್ಟೋಬರ್ 2025, 4:28 IST
<div class="paragraphs"><p>ಬಸನಗೌಡ ಪಾಟೀಲ ಯತ್ನಾಳ</p></div>

ಬಸನಗೌಡ ಪಾಟೀಲ ಯತ್ನಾಳ

   

ವಿಜಯಪುರ: ‘ಹಿಂದೂ ದೇವರಿಗೆ ಅಪಮಾನ, ಅಗೌರವ ತೋರುವ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಸಾಣೆಹಳ್ಳಿ ಶ್ರೀಗಳನ್ನು ಮೊದಲು ಜೈಲಿಗೆ ಹಾಕಬೇಕು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಿಜಗುಣಾನಂದ ಸ್ವಾಮೀಜಿ ಹಿಂದೂ ದೇವತೆಗಳ ಬಗ್ಗೆ ನಾಲಿಗೆ ಹರಿಬಿಡುತ್ತಾರೆ. ಲಕ್ಷ್ಮಿದೇವಿಗೆ ಅಗೌರವದ ಮಾತು ಆಡಿದ್ದಾರೆ. ಹಿಂದೆ ಇಳಕಲ್ ಸ್ವಾಮೀಜಿ ಸಹ ಹೀಗೇ ಮಾತನಾಡಿದ್ದರು’ ಎಂದು ಹೇಳಿದರು.

ADVERTISEMENT

‘ಕನೇರಿ ಶ್ರೀ ಕ್ಷಮೆ ಕೇಳುವುದಿಲ್ಲ. ಅವರಿಗೆ ನಿರ್ಬಂಧ ವಿಧಿಸಿರುವ ವಿಷಯವನ್ನು ಕೋರ್ಟ್‌ನಲ್ಲಿ ಪುನಃ ಪ್ರಶ್ನಿಸಿ ಅದರಲ್ಲಿ ಗೆಲುವು ಸಾಧಿಸುತ್ತೇವೆ. ಗೆಲುವು ಪಡೆದುಕೊಂಡೇ ಮೆರವಣಿಗೆಯೊಂದಿಗೆ ಅವರನ್ನು ವಿಜಯಪುರಕ್ಕೆ ಕರೆ ತರಲಾಗುವುದು’ ಎಂದರು.

‘ಧರ್ಮ ಒಡೆಯುವ ಹಾಗೂ ಕನೇರಿ ಶ್ರೀಗಳಿಗೆ ಅಗೌರವ ತೋರುತ್ತಿರುವ ಈ ನಿಮ್ಮ ನಾಟಕ ಕಂಪನಿ ಬಂದ್ ಮಾಡಿ, ಸುಮ್ಮನೆ ಇರಬೇಕು’ ಎಂದು ಅವರು ಇದೇ ಸಂದರ್ಭದಲ್ಲಿ ಸಚಿವ ಎಂ.ಬಿ.ಪಾಟೀಲ ಅವರಿಗೆ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.