
ಸಿಂದಗಿ: ಪಟ್ಟಣದ ಹೊರವಲಯ ಕಲಕೇರಿ ರಸ್ತೆಯಲ್ಲಿನ ಎಲೈಟ್ ಪಬ್ಲಿಕ್ ಶಾಲೆ ಆವರಣದಲ್ಲಿ ಶನಿವಾರ ಯುವ ವಿಜ್ಞಾನಿಗಳ ಎಕ್ಸ್‌ಪೋ ಮೇಳವನ್ನು ಆಯೋಜನೆ ಮಾಡಲಾಗಿತ್ತು.
ಆವರಣದಲ್ಲೆಲ್ಲ ಪುಟಾಣಿಗಳ ಕಲರವ ತುಂಬಿತ್ತು. ಪಾಲಕರೂ ಅತ್ಯಧಿಕ ಸಂಖ್ಯೆಯಲ್ಲಿದ್ದರು. ಎಕ್ಸ್‌ಪೋ ವಿಜ್ಞಾನ ಜಾತ್ರೆಯಂತೆ ಕಂಗೊಳಿಸುತ್ತಿತ್ತು.
678 ವಿದ್ಯಾರ್ಥಿಗಳು ವಿಜ್ಞಾನ ಮಾದರಿಗಳು, ಗಣಿತ ಮಾದರಿಗಳು, ಕನ್ನಡ ಜ್ಞಾನಕೋಶ ವಿಭಾಗಗಳಲ್ಲಿ ತಾವು ಸಿದ್ಧಪಡಿಸಿದ ಮಾದರಿಗಳ ಬಗ್ಗೆ ಪಟಪಟಾ ಅಂತ ಹೇಳುತ್ತಿದ್ದುದು ಪಾಲಕರಲ್ಲಿ ಖುಷಿ ಮೂಡಿಸಿತ್ತು.
ಎಕ್ಸ್‌ಪೋ ವೀಕ್ಷಣೆಗೆ ಬಂದ ತಹಶೀಲ್ದಾರ್ ಕರೆಪ್ಪ ಬೆಳ್ಳಿ, ವಿದ್ಯಾರ್ಥಿ ಜೀವನದಲ್ಲಿ ವೈಜ್ಞಾನಿಕ ಚಿಂತನೆ ಮತ್ತು ಮನೋಭಾವ ಅತೀ ಅವಶ್ಯ. ಇದು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿ ಆಗುತ್ತದೆ ಎಂದರು.
ಎಲೈಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮುಸ್ತಫಾ ಅಸಂತಾಪೂರ, ಉಪಾಧ್ಯಕ್ಷ ಮನ್ಸೂರ್ ಅಸಂತಾಪೂರ ಹಾಗೂ ಆಡಳಿತಾಧಿಕಾರಿ ಎಂ.ಎಂ.ಅಸಂತಾಪೂರ, ಮುಖ್ಯ ಶಿಕ್ಷಕ ಟಿ.ಎಂ.ಕೆಂಭಾವಿ, ಸಂಯೋಜಕಿ ಭಾಗ್ಯಲಕ್ಷ್ಮಿ ಕೆಂಭಾವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.